#ಕಲ್ಪನೆ
ಒಂದು ಸುಂದರವಾದ ಸಣ್ಣ ಹೂ ತೋಟದಲ್ಲಿ ಸುಮದುರ ಪುಷ್ಪಗಳು ಅರಳಿ ನಿಂತಿದ್ದವು,ಇದನ್ನು ಕಂಡ ತೋಟದ ಮಾಲಿಕ ತುಂಬಾ ಸಂತಸಗೊಂಡು “ನನ್ನ ಶ್ರಮಕ್ಕೆ ತಕ್ಕಫಲ ದೇವರು ಕೊಟಿದ್ದಾನೆಂದು” ಹೇಳಿದ.ಅದೇ ದಾರಿಯಲ್ಲಿ ಹೊಗುತ್ತಿದ್ದ ಕವಿ, ಹೂ ನೋಡಿ “ಅದರ ಸೊಬಗನ್ನು ವರ್ಣಿಸಿ ಕವಿತೆಬರೆದ”,ವರ್ತಕ ನೋಡಿ, ಹೂವಿನ ಮಾರುಕಟ್ಟೆ ಬೆಲೆಯ ಬಗ್ಗೆಲೆಕ್ಕಹಾಕಿದ,ಹೂವು ಮಾರುವ ಹೆಣ್ಣು ಮಗಳು ಹೂತೋಟವನ್ನು ನೋಡಿ“ಇದನ್ನು ನನ್ನ ದಿನನಿತ್ಯದ ಮನೆಗಳಿಗೆ ಕೊಟ್ಟರೆ ನನ್ನ ಆದಾಯ ದ್ವಿಗುಣ ವಾಗುತ್ತೆ”ಎಂದು ಆಲೋಚಿಸಿದಳು,ಒಬ್ಬ ಪ್ರೇಮಿ ಇದನ್ನು ನೋಡಿ “ನನ್ನಪ್ರಿಯತಮೆಗೆ ಇದನ್ನು ಕೊಟ್ಟು ಅವಳಮನಃ ಸಂತೊಷಪಡಿಸುತ್ತೇನೆ ”ಎಂದು ತಿರ್ಮಾನಿಸಿದ ,