ನಂದದಿರಲಿ ಆತ್ಮ ವಿಶ್ವಾಸ.
ಮನುಜನ ಬಾಳು ತೂಗು ದ್ವೀಪದಂತಿದೆ
ಏತಕೆ ನಮ್ಮೊಳಗೆ ವೈ ಮನಸು
ದೀಪದ ಅಂತರಂಗದಂತಿರಲಿ
ನಮ್ಮ ಹೃದಯ
ತೈಲವು ತೀರುವ ತನಕ
ಯಾವ ಸ್ವಾರ್ಥವಿಲ್ಲದೆ
ಪ್ರಖರ ಬೆಳಕ ನೀಡುವಂತೆ
ತ್ಯಾಗದ ಭಾವದಿ ಜೀವನ ಪಾವನ
ತೂಗುದೀಪದ ಸಹನೆ ಇರಲಿ
ದೀಪವ ಇಷ್ಟಪಡದವರಾರು?
ಸಹಸ್ರಾರು ದೀಪಗಳ ಕಾಯಕವೂ ಒಂದೇ
ಜಗವ ಬೆಳಗುವ ಯೋಚನಾ ಲಹರಿಯಿರಲಿ..
ತನುವಿನಲಿ ಉಸಿರಾಡಲು
ದೇವರ ಕೃಪೆಯಂತೆ
ತೂಗುದೀಪ ಬೆಳಗಲು
ಅಂತರಾತ್ಮದ ಪರಿಶುದ್ಧತೆ ಬೇಕು
ಎಷ್ಟೇ ಬಿರುಗಾಳಿ ಬೀಸಿದರೂ
ನಲುಗದೆ ಎದೆಗುಂದದೆ ಬೆಳಗುವ ತೂಗುದೀಪದಂತೆ ಮತ್ತೆ ಮತ್ತೆ ಉಯ್ಯಾಲೆಯಂತೆ ಜೀಕುವ ಜೀವನವೇ ಸ್ವಾರಸ್ಯಕರ.....
ಪಾರ್ವತಿ ಎಸ್ ಕಂಬಳಿ
©PARVATI KAMBLI
#hindi_diwas