ಮತ್ತೆ ಅಪರಿಚಿತರಾಗಿಯೇ ಭೇಟಿಯಾಗಬೇಕಿದೆ ನಾವು; ಮೊದಮೊದಲ ಭೇ | ಕನ್ನಡ ಕಾವ್ಯ

"ಮತ್ತೆ ಅಪರಿಚಿತರಾಗಿಯೇ ಭೇಟಿಯಾಗಬೇಕಿದೆ ನಾವು; ಮೊದಮೊದಲ ಭೇಟಿಗಳ ಹಾಗೇ! ಮತ್ತೆ ಪರಿಚಯ ಹೇಳಬೇಕು, ಮತ್ತೆ ಕುಶಲೋಪರಿ ಕೇಳಬೇಕು, ಮತ್ತೆ ಹೊಸತಾಗಿ ಗೆಳೆತನ ಮಾಡಬೇಕು, ಎಲ್ಲವೂ ಥೇಟು ಮೊದಲಿನ ಹಾಗೇ! ಹೊಸತಾಗಿ ಅದೇ ಸುದ್ದಿಗಳ ಹೇಳಬೇಕು, ಅದದೇ ಹಾಡುಗಳ ಮರಳಿ ಕೇಳಬೇಕು, ಅದೇ ಸಿನಿಮಾಗಳ ಒಟ್ಟಿಗೇ ನೋಡಬೇಕು, ಎಲ್ಲವೂ ಥೇಟು ಮೊದಲಿನ ಹಾಗೇ! ಕಾದಂಬರಿಗಳೆಲ್ಲವ ಬೆರಗಲ್ಲಿ ಓದಬೇಕು, ಗಂಟೆಗಟ್ಟಲೆ ಕವಿತೆಯಾ ಕುರಿತು ಮಾತಾಡಬೇಕು, ಮೌನದಲೂ ಮಾತುಗಳ ಹುಡುಕಬೇಕು, ಎಲ್ಲವೂ ಥೇಟು ಮೊದಲಿನ ಹಾಗೇ! ಒಂದೇ ಬೆಂಚಲಿ ಕೂತು ಹರಟಬೇಕು, ಅರೆಘಳಿಗೆಯ ದಾರಿಯನು ತಾಸೊತ್ತು ನಡೆಯಬೇಕು, ನಗಬೇಕು, ಅಳಬೇಕು, ಹುಸಿಮುನಿಸು ತೋರಬೇಕು, ಎಲ್ಲವೂ ಥೇಟು ಮೊದಲಿನ ಹಾಗೇ! ಇಷ್ಟೆಲ್ಲ ಬೇಕುಗಳು ಸಿಗಬೇಕಾದರೆ, ನಿನ್ನೆಗಳೆಲ್ಲ ಮರಳಿ ನಮ್ಮ ಬಳಿ ಬರಬೇಕು! ನಾವಿಬ್ಬರೂ ಮತ್ತೆ ಅಪರಿಚಿತರಾಗಿ ಭೇಟಿಯಾಗಬೇಕು! ಥೇಟು ಮೊದಲಿನ ಹಾಗೆಯೇ! ಜನ್ಮದಿನದ ಹಾರ್ದಿಕ ಶುಭಾಶಯಗಳು ಶ್ರೀ.. ©Anand Hegde"

 ಮತ್ತೆ ಅಪರಿಚಿತರಾಗಿಯೇ
ಭೇಟಿಯಾಗಬೇಕಿದೆ ನಾವು;
ಮೊದಮೊದಲ ಭೇಟಿಗಳ ಹಾಗೇ!
ಮತ್ತೆ ಪರಿಚಯ ಹೇಳಬೇಕು,
ಮತ್ತೆ ಕುಶಲೋಪರಿ ಕೇಳಬೇಕು,
ಮತ್ತೆ ಹೊಸತಾಗಿ ಗೆಳೆತನ ಮಾಡಬೇಕು,
ಎಲ್ಲವೂ ಥೇಟು ಮೊದಲಿನ ಹಾಗೇ!
ಹೊಸತಾಗಿ ಅದೇ ಸುದ್ದಿಗಳ ಹೇಳಬೇಕು,
ಅದದೇ ಹಾಡುಗಳ ಮರಳಿ ಕೇಳಬೇಕು,
ಅದೇ ಸಿನಿಮಾಗಳ ಒಟ್ಟಿಗೇ ನೋಡಬೇಕು,
ಎಲ್ಲವೂ ಥೇಟು ಮೊದಲಿನ ಹಾಗೇ!
ಕಾದಂಬರಿಗಳೆಲ್ಲವ ಬೆರಗಲ್ಲಿ ಓದಬೇಕು,
ಗಂಟೆಗಟ್ಟಲೆ ಕವಿತೆಯಾ ಕುರಿತು ಮಾತಾಡಬೇಕು,
ಮೌನದಲೂ ಮಾತುಗಳ ಹುಡುಕಬೇಕು,
ಎಲ್ಲವೂ ಥೇಟು ಮೊದಲಿನ ಹಾಗೇ!
ಒಂದೇ ಬೆಂಚಲಿ ಕೂತು ಹರಟಬೇಕು,
ಅರೆಘಳಿಗೆಯ ದಾರಿಯನು ತಾಸೊತ್ತು ನಡೆಯಬೇಕು,
ನಗಬೇಕು, ಅಳಬೇಕು, ಹುಸಿಮುನಿಸು ತೋರಬೇಕು,
ಎಲ್ಲವೂ ಥೇಟು ಮೊದಲಿನ ಹಾಗೇ!
ಇಷ್ಟೆಲ್ಲ ಬೇಕುಗಳು ಸಿಗಬೇಕಾದರೆ,
ನಿನ್ನೆಗಳೆಲ್ಲ ಮರಳಿ ನಮ್ಮ ಬಳಿ ಬರಬೇಕು!
ನಾವಿಬ್ಬರೂ ಮತ್ತೆ ಅಪರಿಚಿತರಾಗಿ ಭೇಟಿಯಾಗಬೇಕು!
ಥೇಟು ಮೊದಲಿನ ಹಾಗೆಯೇ!



ಜನ್ಮದಿನದ ಹಾರ್ದಿಕ ಶುಭಾಶಯಗಳು ಶ್ರೀ..

©Anand Hegde

ಮತ್ತೆ ಅಪರಿಚಿತರಾಗಿಯೇ ಭೇಟಿಯಾಗಬೇಕಿದೆ ನಾವು; ಮೊದಮೊದಲ ಭೇಟಿಗಳ ಹಾಗೇ! ಮತ್ತೆ ಪರಿಚಯ ಹೇಳಬೇಕು, ಮತ್ತೆ ಕುಶಲೋಪರಿ ಕೇಳಬೇಕು, ಮತ್ತೆ ಹೊಸತಾಗಿ ಗೆಳೆತನ ಮಾಡಬೇಕು, ಎಲ್ಲವೂ ಥೇಟು ಮೊದಲಿನ ಹಾಗೇ! ಹೊಸತಾಗಿ ಅದೇ ಸುದ್ದಿಗಳ ಹೇಳಬೇಕು, ಅದದೇ ಹಾಡುಗಳ ಮರಳಿ ಕೇಳಬೇಕು, ಅದೇ ಸಿನಿಮಾಗಳ ಒಟ್ಟಿಗೇ ನೋಡಬೇಕು, ಎಲ್ಲವೂ ಥೇಟು ಮೊದಲಿನ ಹಾಗೇ! ಕಾದಂಬರಿಗಳೆಲ್ಲವ ಬೆರಗಲ್ಲಿ ಓದಬೇಕು, ಗಂಟೆಗಟ್ಟಲೆ ಕವಿತೆಯಾ ಕುರಿತು ಮಾತಾಡಬೇಕು, ಮೌನದಲೂ ಮಾತುಗಳ ಹುಡುಕಬೇಕು, ಎಲ್ಲವೂ ಥೇಟು ಮೊದಲಿನ ಹಾಗೇ! ಒಂದೇ ಬೆಂಚಲಿ ಕೂತು ಹರಟಬೇಕು, ಅರೆಘಳಿಗೆಯ ದಾರಿಯನು ತಾಸೊತ್ತು ನಡೆಯಬೇಕು, ನಗಬೇಕು, ಅಳಬೇಕು, ಹುಸಿಮುನಿಸು ತೋರಬೇಕು, ಎಲ್ಲವೂ ಥೇಟು ಮೊದಲಿನ ಹಾಗೇ! ಇಷ್ಟೆಲ್ಲ ಬೇಕುಗಳು ಸಿಗಬೇಕಾದರೆ, ನಿನ್ನೆಗಳೆಲ್ಲ ಮರಳಿ ನಮ್ಮ ಬಳಿ ಬರಬೇಕು! ನಾವಿಬ್ಬರೂ ಮತ್ತೆ ಅಪರಿಚಿತರಾಗಿ ಭೇಟಿಯಾಗಬೇಕು! ಥೇಟು ಮೊದಲಿನ ಹಾಗೆಯೇ! ಜನ್ಮದಿನದ ಹಾರ್ದಿಕ ಶುಭಾಶಯಗಳು ಶ್ರೀ.. ©Anand Hegde

#Likho

People who shared love close

More like this

Trending Topic