🌹ಓಂ ನಮಃ ಶಿವಾಯ 🌹
ಮಂತ್ರ ಮತ್ತು ಅರ್ಥ ಸರಸ್ವತೀ ಧ್ಯಾನಂ – ಸೋಮಾರಿತನ ಹೋಗಲು
ಯಾಕುಂದೇಂದು ತುಷಾರಹಾರ ಧವಳಾಯಾಶುಭ್ರವಸ್ತ್ರವಾನಿತಾ ಯಾವೀಣಾ ವರದಂಡ ಮಂಡಿತಕರ ಯಾ ಶ್ವೇತ ಪದ್ಮಾಸನಾ | ಯಾ ಬ್ರಹ್ಮಾಚ್ಯುತ ಶಂಕರ ಪ್ರಭುತಿರ್ಭಿ: ದೇವೈಸದಾ ಪೂಜಿತಾ ಸಾಮಾಂ ಪಾತು ಸರಸ್ವತೀ ನಿಶ್ಲೇಷ ಜಾಡ್ಯಪಹಾ ||
ಕುಂದ ಪುಷ್ಪಗಳ ಹಾರ ಧರಿಸಿ, ಶುಭ್ರವಾದ ವಸ್ತ್ರವನ್ನುಟ್ಟು ಕೈಯಲ್ಲಿ ವೀಣೆಯನ್ನು ವರವನ್ನು ಪುಸ್ತಕವನ್ನು ಜಪಮಾಲೆಯನ್ನು ಹಿಡಿದು, ಪದ್ಮಾಸನ ಸ್ಥಿತಳಾಗಿ, ತ್ರಿಮೂರ್ತಿಗಳಿಂದಲೂ ಸದಾ ಪೂಜಿತಳಾಗಿರುವ ಸರಸ್ವತಿಯು ನನ್ನ ಲ್ಲಿರುವ ಅಜ್ಞಾನವನ್ನು ಹೋಗಲಾಡಿಸಲಿ ಎಂದು ನಿತ್ಯವೂ ಪ್ರಾರ್ಥಿಸುತ್ತೇನೆ.
ಪ್ರತಿದಿನ 108 ಸಲ ಜಪ ಮಾಡಿ, ಜನ್ಮವಾರದಲ್ಲಿ ಜಪಮಾಲೆ ಪೂಜಿಸಿ ತಾಂಬೂಲದೊಡನೆ ದಾನ ಮಾಡುತ್ತಿದ್ದರೆ, ಅಜ್ಞಾನ ಹೋಗುವುದು. ಜಡತ್ವ ಮೈಬಿಡುವುದು. ಸದಾ ಲವಲವಿಕೆಯಿಂದ ಇರಬಹುದು.
©YOGI Karnataka
#JallianwalaBagh