Anand Hegde

Anand Hegde

ಮಾತಿನೂರಿನ ಮೌನಿ!

  • Latest
  • Popular
  • Video

ಮತ್ತೆ ಅಪರಿಚಿತರಾಗಿಯೇ ಭೇಟಿಯಾಗಬೇಕಿದೆ ನಾವು; ಮೊದಮೊದಲ ಭೇಟಿಗಳ ಹಾಗೇ! ಮತ್ತೆ ಪರಿಚಯ ಹೇಳಬೇಕು, ಮತ್ತೆ ಕುಶಲೋಪರಿ ಕೇಳಬೇಕು, ಮತ್ತೆ ಹೊಸತಾಗಿ ಗೆಳೆತನ ಮಾಡಬೇಕು, ಎಲ್ಲವೂ ಥೇಟು ಮೊದಲಿನ ಹಾಗೇ! ಹೊಸತಾಗಿ ಅದೇ ಸುದ್ದಿಗಳ ಹೇಳಬೇಕು, ಅದದೇ ಹಾಡುಗಳ ಮರಳಿ ಕೇಳಬೇಕು, ಅದೇ ಸಿನಿಮಾಗಳ ಒಟ್ಟಿಗೇ ನೋಡಬೇಕು, ಎಲ್ಲವೂ ಥೇಟು ಮೊದಲಿನ ಹಾಗೇ! ಕಾದಂಬರಿಗಳೆಲ್ಲವ ಬೆರಗಲ್ಲಿ ಓದಬೇಕು, ಗಂಟೆಗಟ್ಟಲೆ ಕವಿತೆಯಾ ಕುರಿತು ಮಾತಾಡಬೇಕು, ಮೌನದಲೂ ಮಾತುಗಳ ಹುಡುಕಬೇಕು, ಎಲ್ಲವೂ ಥೇಟು ಮೊದಲಿನ ಹಾಗೇ! ಒಂದೇ ಬೆಂಚಲಿ ಕೂತು ಹರಟಬೇಕು, ಅರೆಘಳಿಗೆಯ ದಾರಿಯನು ತಾಸೊತ್ತು ನಡೆಯಬೇಕು, ನಗಬೇಕು, ಅಳಬೇಕು, ಹುಸಿಮುನಿಸು ತೋರಬೇಕು, ಎಲ್ಲವೂ ಥೇಟು ಮೊದಲಿನ ಹಾಗೇ! ಇಷ್ಟೆಲ್ಲ ಬೇಕುಗಳು ಸಿಗಬೇಕಾದರೆ, ನಿನ್ನೆಗಳೆಲ್ಲ ಮರಳಿ ನಮ್ಮ ಬಳಿ ಬರಬೇಕು! ನಾವಿಬ್ಬರೂ ಮತ್ತೆ ಅಪರಿಚಿತರಾಗಿ ಭೇಟಿಯಾಗಬೇಕು! ಥೇಟು ಮೊದಲಿನ ಹಾಗೆಯೇ! ಜನ್ಮದಿನದ ಹಾರ್ದಿಕ ಶುಭಾಶಯಗಳು ಶ್ರೀ.. ©Anand Hegde

#ಕಾವ್ಯ #Likho  ಮತ್ತೆ ಅಪರಿಚಿತರಾಗಿಯೇ
ಭೇಟಿಯಾಗಬೇಕಿದೆ ನಾವು;
ಮೊದಮೊದಲ ಭೇಟಿಗಳ ಹಾಗೇ!
ಮತ್ತೆ ಪರಿಚಯ ಹೇಳಬೇಕು,
ಮತ್ತೆ ಕುಶಲೋಪರಿ ಕೇಳಬೇಕು,
ಮತ್ತೆ ಹೊಸತಾಗಿ ಗೆಳೆತನ ಮಾಡಬೇಕು,
ಎಲ್ಲವೂ ಥೇಟು ಮೊದಲಿನ ಹಾಗೇ!
ಹೊಸತಾಗಿ ಅದೇ ಸುದ್ದಿಗಳ ಹೇಳಬೇಕು,
ಅದದೇ ಹಾಡುಗಳ ಮರಳಿ ಕೇಳಬೇಕು,
ಅದೇ ಸಿನಿಮಾಗಳ ಒಟ್ಟಿಗೇ ನೋಡಬೇಕು,
ಎಲ್ಲವೂ ಥೇಟು ಮೊದಲಿನ ಹಾಗೇ!
ಕಾದಂಬರಿಗಳೆಲ್ಲವ ಬೆರಗಲ್ಲಿ ಓದಬೇಕು,
ಗಂಟೆಗಟ್ಟಲೆ ಕವಿತೆಯಾ ಕುರಿತು ಮಾತಾಡಬೇಕು,
ಮೌನದಲೂ ಮಾತುಗಳ ಹುಡುಕಬೇಕು,
ಎಲ್ಲವೂ ಥೇಟು ಮೊದಲಿನ ಹಾಗೇ!
ಒಂದೇ ಬೆಂಚಲಿ ಕೂತು ಹರಟಬೇಕು,
ಅರೆಘಳಿಗೆಯ ದಾರಿಯನು ತಾಸೊತ್ತು ನಡೆಯಬೇಕು,
ನಗಬೇಕು, ಅಳಬೇಕು, ಹುಸಿಮುನಿಸು ತೋರಬೇಕು,
ಎಲ್ಲವೂ ಥೇಟು ಮೊದಲಿನ ಹಾಗೇ!
ಇಷ್ಟೆಲ್ಲ ಬೇಕುಗಳು ಸಿಗಬೇಕಾದರೆ,
ನಿನ್ನೆಗಳೆಲ್ಲ ಮರಳಿ ನಮ್ಮ ಬಳಿ ಬರಬೇಕು!
ನಾವಿಬ್ಬರೂ ಮತ್ತೆ ಅಪರಿಚಿತರಾಗಿ ಭೇಟಿಯಾಗಬೇಕು!
ಥೇಟು ಮೊದಲಿನ ಹಾಗೆಯೇ!



ಜನ್ಮದಿನದ ಹಾರ್ದಿಕ ಶುಭಾಶಯಗಳು ಶ್ರೀ..

©Anand Hegde

#Likho

13 Love

 ನಿನ್ನ ನೆನಪುಗಳು ಇರುವೆಡೆಯಲ್ಲೇ
ಇದೆ ನೋಡು ನನ್ನ ಬಿಡಾರ!
ನಿನ್ನ ಜ್ಞಾಪಕ ಮಾತ್ರದಿಂದಲೇ
ತುಟಿಯಂಚಲಿ ನಗುವೊಂದು ಮೂಡಿದೆ,
ನೀನೆಂದರೇನೆ ಒಂದು ಸಡಗರ!

©Anand Hegde

#ಸಡಗರ #snowfall #ನೆನಪು #ಕನ್ನಡ_ಬರಹಗಳು #ಕನ್ನಡ #ಪ್ರೀತಿ #love #Memories #poem #Happiness

67 View

 ಸಂಜೆಯ ಸೆರಗಲ್ಲಿ ಕುಳಿತು,
ನಿನ್ನ ಮಾತುಗಳ ಆಲಿಸಿದರೆ
ಅದುವೇ ದಿವ್ಯಸಂಗೀತ!
ಪಿಸುಮಾತುಗಳೆಲ್ಲ
ರೆಕ್ಕೆ ಬಿಚ್ಚಿ ಹಾರಾಡುವಾಗ,
ನಿಟ್ಟುಸಿರೂ ಸಹ ಜೀವಂತ!!

©Anand Hegde

#ಜೀವಂತ #loveshayari #ಕನ್ನಡ_ಬರಹಗಳು #ಕನ್ನಡ #poem #Poet #love #feeelings #music #ಪ್ರೀತಿ

123 View

#ಕನ್ನಡ_ಬರಹಗಳು #ಪ್ರೀತಿ #ಕನ್ನಡ #ಕವಿತೆ #ಒಲವು #humantouch  ಬೇಕಂತಲೇ ಸತಾಯಿಸು
ನೀ ನನ್ನ ಕೈಗೆ ಸಿಗದೆ!
ಮತ್ತೆ ಮತ್ತೆ ಒಲವಿಗೆ ಬೀಳುತ್ತೇನೆ,
ಇದೇ ಮೊದಲೆಂಬಂತೆ ನಿನ್ನೆಡೆ!

©Anand Hegde

ನಿನ್ನ ಬದುಕಿನ ಯಾವುದೋ ಒಂದು ಅಧ್ಯಾಯವಾಗಿ ಉಳಿದುಬಿಡುವ ಆಸೆಯಾಗಿದೆ! ಕಣ್ಣೆದುರಂತೂ ನಿನ್ನ ದಿಟ್ಟಿಸಲಾಗದ ನಾನು, ಬೆರಗುಗಣ್ಣಲ್ಲಿ ನೀ ನನ್ನ ಓದುವಾಗಲಾದರೂ ಕಣ್ತುಂಬಿಕೊಳ್ಳುತ್ತೇನೆ ದೃಷ್ಟಿ ಕದಲಿಸದೇ!! ©Anand Hegde

 ನಿನ್ನ ಬದುಕಿನ ಯಾವುದೋ ಒಂದು
ಅಧ್ಯಾಯವಾಗಿ ಉಳಿದುಬಿಡುವ ಆಸೆಯಾಗಿದೆ!
ಕಣ್ಣೆದುರಂತೂ ನಿನ್ನ ದಿಟ್ಟಿಸಲಾಗದ ನಾನು,
ಬೆರಗುಗಣ್ಣಲ್ಲಿ ನೀ ನನ್ನ ಓದುವಾಗಲಾದರೂ ಕಣ್ತುಂಬಿಕೊಳ್ಳುತ್ತೇನೆ ದೃಷ್ಟಿ ಕದಲಿಸದೇ!!

©Anand Hegde

#ಅಧ್ಯಾಯ #kitaabein #ಕನ್ನಡ #ಕನ್ನಡ_ಬರಹಗಳು #ಪ್ರೀತಿ #poem #love #Books #Mobbhat #Memories

10 Love

 ನಿನ್ನಷ್ಟೇ, ನಿನ್ನೂರಿನ ದಾರಿಯೂ
ಜ್ಞಾಪಕವಾಗುತ್ತದೆ ನನಗೆ!
ಯಾಕೆಂದರೆ ಆ ಹಾದಿಯ ಇಕ್ಕೆಲಗಳಲ್ಲಿ
ಈಗಲೂ ಕೇಳಿಸುತ್ತದೆ ನಿನ್ನಯ ಹೂನಗೆ!!

©Anand Hegde

#ಹೂನಗೆ #WalkingInWoods #ಕನ್ನಡ_ಬರಹಗಳು #ಕನ್ನಡ #poem #love #Memories #poetcommunity #ಪ್ರೀತಿ

262 View

Trending Topic