ಸಖಿ
ಅವಳು ಕಡಲಿನ ಅಲೆಗಳನು
ಬೊಗಸೆಯಲಿ ಹಿಡಿದು ಕುಣಿದು
ನಲಿದು ನಿರಾಳಗೊಂಡವಳು
ಕಾವ್ಯದ ಪ್ರೀತಿಯಲಿ ನಿತ್ಯ ಕಂಗೊಳಿಸಿದವಳು
ನಿಷ್ಕಲ್ಮಶ ಮನಸಿನ ಹೃದಯಂಗಮಯಕೆ
ಸ್ಫೂರ್ತಿಯಾದವಳು
ಆದರಿಗ ಬಹುಕಿನ ಚಕ್ರವ್ಯೂಹಕೆ ಸಿಲುಕಿ
ನೆಮ್ಮದಿಯ ಚಿರನಿದ್ರೆಯನು ಬಯಸುತ್ತಿದ್ದಾಳೆ
ಈಗ ಅವಳು ದಿವ್ಯ ಮೌನಕೆ ಬಂಧಿಸಲ್ಪಟ್ಟ ಸಖಿಮಾತ್ರ
ರಜಿಯಾ ಕೆ ಭಾವಿಕಟ್ಟಿ.
©Rajiya Bhavikatti
#Thoughts