ಬಿದ್ದಾಗ ಅಡ್ಕೊಂಡು ನಗುವರ
ಮುಂದೆ ಎದ್ದೇಳುವ ಪ್ರಯತ್ನ !
ಓದಲು ತಲೆಗೆ ಹತ್ತದಿದ್ದರೆ
ಓದ ಬೇಕು ಎನ್ನುವ ಪ್ರಯತ್ನ !
ಶಕ್ತಿ ಇಲ್ಲದಿದ್ದರೂ ಬಿಡದೆ
ಏಳಲು ಶಕ್ತಿ ಮೀರಿದ ಪ್ರಯತ್ನ !
ನಗು ಬಾರದಿದ್ದರೂ
ಬಲವಂತವಾಗಿ ನಗುವ ಪ್ರಯತ್ನ !
ಇದೆಲ್ಲ ಜೀವನದ ಕಟು ಸತ್ಯ
ಆದರೂ ಮುಚ್ಚಿಡುವ ಪ್ರಯತ್ನ !
ಈ ಎಲ್ಲಾ ಪ್ರಯತ್ನ
ಪ್ರಾಮಾಣಿಕವಾಗಿ ಇದ್ದರೆ ಸಾರ್ಥಕತೆಯ ನಿಟ್ಟುಸಿರು ನಿದ್ದೆ ಮಾಡಲು ಮಲಗಿದಾಗ .... ನೆನೆದರೆ .. ಚೆನ್ನ... !
©Krishna Raghavendra
#Ambitions