White ಸವಿ ಸವಿ ನೆನಪು
ಬಾಲ್ಯದ ನೆನಪು
ನೆನೆದು ಸವಿದಷ್ಟು ಹೊನಪು
ಮನೆಯ ಕೆಲಸವೆಲ್ಲಾ ಮುಗಿಸಿ ಸುಮ್ಮನೆ ಕುಳಿತಿದ್ದೆ. ಮಗ ಆಟ ಆಡುವುದು ಆಡುವುದು ನೋಡಿ ನನಗೆ ನನ್ನ ಆ ಅಮೂಲ್ಯವಾದ ಮತ್ತೆ ಬಾರದ ಬಾಲ್ಯದ ದಿನಗಳು ನೆನಪಾಗಿ ಕಣ್ತುಂಬಿ ಬಂತು. ಆ ದಿನಗಳೇ ಹಾಗೆ ಏನೋ ಅರಿಯದ ಮುಗ್ಧ ಮನಸ್ಸುಗಳು ಬೇಧಭಾವ ಇಲ್ಲದೆ ಜೊತೆಯಾಗಿ ಆಡಿ ಜೊತೆಯಾಗಿ ಕೂತು ಹಂಚಿ ಊಟ ಮಾಡುತ್ತಿದ್ದೇವು. ಬಾಲ್ಯದಲ್ಲಿ ಆಡದ ಆಟವಿಲ್ಲ ನೋಡದೆ ನೋಟವಿಲ್ಲಾ ಕೇಳದ ಪಾಠವಿಲ್ಲ ತಿನ್ನದ ಊಟವಿಲ್ಲಾ. ಚಿಂತೆಯಿಲ್ಲದ ಯಾವುದೇ ಜವಾಬ್ದಾರಿ ಇಲ್ಲದ ಬಾಲ್ಯ ಈಗ ಬೇಕೆಂದರು ಮತ್ತೆ ಬರದು.ಮರಕೋತಿ ಆಟ, ಚಿನ್ನಿದಾಂಡು, ಕುಂಟೆಬಿಲ್ಲೆ ಆಟ, ಸರಿತಪ್ಪು ಆಟ, ಕಳ್ಳ ಪೋಲಿಸ್ ಆಟ, ಮನೆಯಾಟ, ಮಣ್ಣಿನಲ್ಲಿರುವ ಆಟ, ಅಡುಗೆ ಆಟ, ನೀರಲ್ಲಿ ದೋಣಿ ಮಾಡಿ ಬಿಟ್ಟ ನೆನಪು, ಹೀಗೆ ಒಂದೇ ಎರಡೇ ಅಮ್ಮನ ಸೀರೆ ಉಟ್ಟು ಅಮ್ಮನಂತೆ ಆದದ್ದು ಗೊಂಬೆಯನ್ನು ಮಗುವೆಂದು ಅದಕ್ಕೆ ತಿನ್ನಿಸಿ ಸ್ನಾನ ಮಾಡಿಸುವುದು ಹೀಗೆ ತುಂಬಾ ಆಟಗಳನ್ನು ಆಡಿಕೊಂಡು ಬಾಲ್ಯ ಕಳೆದೇವು. ಪೇರಳೆ ,ನೇರಳೆ ,ಮುಳ್ಳುಹಣ್ಣು, ಚಾಪೆ ಹಣ್ಣು, ಬಾಳೆಹಣ್ಣು, ಬಾರಿಹಣ್ಣು, ನೆಲ್ಲಿಕಾಯಿ ಕಾಡಿನ ನೈಸರ್ಗಿಕವಾದ ಆರೋಗ್ಯಕರ ಹಣ್ಣುಗಳೇ ನಮಗೆ ಆಹಾರ ಆರೋಗ್ಯಕರ ಜೀವನ ನಮ್ಮದಾಗಿತ್ತು.
ಗೆಳೆಯರೊಂದಿಗೆ ಆಟ ಆಡುತ್ತಿದ್ದರೆ ನಮಗೆ ಊಟ ಬೇಡ ಪಾಠ ಬೇಡ ಅಂತ ಅನ್ನಿಸುತ್ತಿತ್ತು. ಬಾಲ್ಯವೆಂದರೆ ಏನೋ ಖುಷಿ ಆ ಬಾಲ್ಯದ ದಿನಗಳನ್ನು ನೆನೆದು ಆಯಾಸವೆಲ್ಲಾ ಮಾಯಾ ಏನೋ ಒಂಥರಾ ಮನಸಿಗೆ ಸಮಾಧಾನ. ಜಂಟಾಟದ ಜೀವನದಲ್ಲಿ ಮುಳುಗಿದ್ದ ನಮಗೆ ಬಾಲ್ಯದ ನೆನಪುಗಳು ತರುವವು ತಂಪು...
©Ramya Prabhu
Continue with Social Accounts
Facebook Googleor already have account Login Here