"ಒಂಟಿ ಮನೆ"
ಮಲೆನಾಡ ತಪ್ಪಲಿನಲಿ, ಹಚ್ಚ ಹಸಿರಿನ ವನದಲಿ,
ಸಾಗಿತ್ತು ನನ್ನ ಪಯಣ, ಸೊಗಸಾದ ಮೋಜಿನಲಿ.
ಅಮವಾಸ್ಯೆಯ ರಾತ್ರಿಯದು, ಸುತ್ತಲೂ ಕಗ್ಗತ್ತಲು,
ಏತಕೋ? ಏನೋ? ಗಾಡಿಯೂ ಕೈ ಕೊಟ್ಟಿರಲು,
ಕಂಡೆ ನಾ ದೂರದಲಿ ಒಂಟಿ ಮನೆಯೊಂದು,
ಹೊರಟೆ ನಾ ಅತ್ತ ಕಡೆ, ಆಶ್ರಯ ಬಯಸಿ ಅಂದು,
ಹಾಕಿತ್ತು ಸೂಚನೆ ಅಲ್ಲಿದ್ದ ಫಲಕದಲಿ,
ಓದಿದೆ ನಾನದನು ತುಂಬಾ ಕುತೂಹಲದಲಿ,
"ದಯವಿಟ್ಟು ಹೋಗದಿರಿ, ಒಂಟಿ ಮನೆಯೊಳಗೆ,
ಹೋದರೆ ಬಾರದಿರಿ ನೀವು ಎಂದೂ ಹೊರಗೆ."
ಧೈರ್ಯದಿ, ಬಿಸಿರಕ್ತದಿ ಹೊರಟೆ ನಾ ಆ ಕಡೆಗೆ,
ಏನಾದೀತು? ಎನ್ನುತ್ತಲೇ ಕಾಲಿಟ್ಟೆ ನಾ ಮನೆಯೊಳಗೆ,
ಜೇಡ ಕಟ್ಟಿದ ಮೂಲೆ, ಹಚ್ಚಿ ಆರಿದ ಒಲೆ,
ಕಸ ಗೂಡಿಸದ ನೆಲ, ಅಲ್ಲಲ್ಲಿ ನಿಂತ ಜಲ,
ಹಾರಿ ಹೋಗಿಹ ಹಂಚು, ಮುರಿದು ಬಿದ್ದಿಹ ಬೆಂಚು,
ಅಲ್ಲಲ್ಲಿ ಕೆದರಿದ ಗೋಡೆ, ಅಲ್ಲಲ್ಲಿ ಬಿದ್ದಿದ್ದ ಕಲ್ಲು ಬಂಡೆ,
ಬಂಡೆಗೆ ಕಾಲು ತಾಕಿ ಕೆಳಗೆ ನಾ ಬೀಳಲು,
ಯಾರೋ ಕಿರುಚಿದ ಸದ್ದು ಕಿವಿ ಕೇಳಲು,
ಯಾರೋ ನನ್ನೆದೆಯ ಮೇಲೆ ಕೈ ಊರಲು,
ಎದೆ ಬಡಿತ ನಿಂತಿತ್ತು ಅರೆಘಳಿಗೆ, ಎಚ್ಚರವಾಯಿತು ಕ್ಷಣದೊಳಗೆ.
ಇಷ್ಟೊತ್ತು ಕಂಡಿದ್ದು ಕನಸಾಗಿತ್ತು,
ಸತ್ತ ಜೀವ ಬದುಕಿ ಬಂದಂತಾಗಿತ್ತು...
--IMY
Continue with Social Accounts
Facebook Googleor already have account Login Here