Yakshitha

Yakshitha

  • Latest
  • Popular
  • Video

White ಪ್ರೀತಿ ಮತ್ತು ಕಾಳಜಿ ನಮಗೆ ತೋರಿಸಿದಾಗ ನಾವು ಅನುಭವಿಸಿದ ಅನೇಕ ಭಾವನೆಗಳು ಪ್ರೀತಿ. ಇದು ಕೇವಲ ಪ್ರಣಯವಲ್ಲ. ಪ್ರೀತಿಯು ಅನೇಕ ವಿಷಯಗಳನ್ನು ಅರ್ಥೈಸಬಲ್ಲದು ಮತ್ತು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಪ್ರಾಮಾಣಿಕತೆ, ಕಾಳಜಿ ಮತ್ತು ವಿಶ್ವಾಸವು ಪ್ರೀತಿಯನ್ನು ರೂಪಿಸುತ್ತದೆ. ಪ್ರತಿಯೊಬ್ಬರೂ ಪ್ರೀತಿಸಬೇಕೆಂದು ಬಯಸುತ್ತಾರೆ. ಇದು ಅವರಿಗೆ ಸಂತೋಷವನ್ನು ನೀಡುತ್ತದೆ ಮತ್ತು ಅವರು ಮುಖ್ಯವೆಂದು ಭಾವಿಸುವಂತೆ ಮಾಡುತ್ತದೆ. ನಾವು ಅನೇಕ ವಿಷಯಗಳಿಗಾಗಿ ಪ್ರೀತಿಸುತ್ತೇವೆ ಮತ್ತು ನಾವು ಭಾವಿಸುವ ಪ್ರೀತಿ ನಮ್ಮ ಜೀವನದುದ್ದಕ್ಕೂ ಬದಲಾಗುತ್ತದೆ. ©Yakshitha

#ಪ್ರೀತಿ #Sad_Status  White ಪ್ರೀತಿ ಮತ್ತು ಕಾಳಜಿ ನಮಗೆ ತೋರಿಸಿದಾಗ ನಾವು ಅನುಭವಿಸಿದ ಅನೇಕ ಭಾವನೆಗಳು ಪ್ರೀತಿ. ಇದು ಕೇವಲ ಪ್ರಣಯವಲ್ಲ. ಪ್ರೀತಿಯು ಅನೇಕ ವಿಷಯಗಳನ್ನು ಅರ್ಥೈಸಬಲ್ಲದು ಮತ್ತು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಪ್ರಾಮಾಣಿಕತೆ, ಕಾಳಜಿ ಮತ್ತು ವಿಶ್ವಾಸವು ಪ್ರೀತಿಯನ್ನು ರೂಪಿಸುತ್ತದೆ. ಪ್ರತಿಯೊಬ್ಬರೂ ಪ್ರೀತಿಸಬೇಕೆಂದು ಬಯಸುತ್ತಾರೆ. ಇದು ಅವರಿಗೆ ಸಂತೋಷವನ್ನು ನೀಡುತ್ತದೆ ಮತ್ತು ಅವರು ಮುಖ್ಯವೆಂದು ಭಾವಿಸುವಂತೆ ಮಾಡುತ್ತದೆ. ನಾವು ಅನೇಕ ವಿಷಯಗಳಿಗಾಗಿ ಪ್ರೀತಿಸುತ್ತೇವೆ ಮತ್ತು ನಾವು ಭಾವಿಸುವ ಪ್ರೀತಿ ನಮ್ಮ ಜೀವನದುದ್ದಕ್ಕೂ ಬದಲಾಗುತ್ತದೆ.

©Yakshitha

#Sad_Status ಪ್ರೀತಿ ಗಂಡ-ಹೆಂಡ್ತಿ ಪ್ರೀತಿ ಜಗಳ ಪ್ರೀತಿಯ ತುಣುಕು ಪ್ರೀತಿಯ ಕಾಣಿಕೆ

10 Love

ನಿನಗೆ ಏನೂ ಆಗೊಲ್ಲ , ಹೇಳಿದ್ದು ಮಾಡಲ್ಲ . ಜೀವನ ನೀನು ಅಂದುಕೊಂಡಷ್ಟು ಸುಲಭವಲ್ಲ ..." ಹೀಗೆ ನೀನು ಮಾತು ಆಡುತ್ತಲೇ ಹೋದೆ . ನಿನ್ನ ಈ ಮಾತುಗಳು ಒಂದು ಸಾರಿ ಅಲ್ಲ ಈಗಾಗಲೇ ಹಲವು ಬಾರಿ ಹೇಳಿದ್ದೆ , ನಾನೂ ಕೇಳಿದ್ದೆ . ಸಮಯ ಒಂದೇ ತರಹ ಇರುವುದಿಲ್ಲ ಅಲ್ವಾ ? ಅವತ್ತು ನಿನ್ನ ಈ ಮಾತುಗಳು ನನಗೆ ಬಹಳವಾಗೇ ಮನಸ್ಸಿಗೆ ಚುಚ್ಚಿತ್ತು . ಸ್ವಾಭಿಮಾನದಿಂದ ಮನಸ್ಸು ಕುದ್ದಿತ್ತು . ಎರಡು ವರ್ಷದ ಸ್ನೇಹ, ಪ್ರೀತಿಯೂ ಬೇಡ ಅನ್ನಿಸಿದ್ದು ಆಗಲೇ ನೋಡು . ನೀನು ನನಗೆ ಬರೀ ಗೆಳೆಯನಾಗಿರಲಿಲ್ಲ . ಗುರುವೂ ಆಗಿದ್ದೆ . ಪ್ರತೀ ಸಾರಿಯೂ ನಿನ್ನ ಪ್ರತಿಯೊಂದು ಮಾತಿಗೂ ನಾನು ಬೆಲೆ ಕೊಟ್ಟು ನೀ ಹೇಳಿದಂತೆ ಕೇಳಿದ್ದೆ . ಆತ್ಮ ವಿಶ್ವಾಸ ಬೆಳೆಸಿದವನು ನೀನು ಆದರೆ ನೀನೇ ಮತ್ತೆ ಮತ್ತೆ ಇಂಥ ಮಾತುಗಳು ಹೇಳಿದಾಗ ನಾನು ಸಹಿಸದಾದೆ. ನಿನ್ನ ಬಳಿ ಇನ್ನು ಮಾತನಾಡಬಾರದು , ಯಾವಾಗ ನಾನು ನಿನ್ನ ಮಾರ್ಗದರ್ಶನ ಇಲ್ಲದೇ ಅಂದುಕೊಂಡದ್ದು ಸಾಧಿಸುವೆನೋ, ಆಗಲೇ ಮತ್ತೆ ನಿನ್ನ ಬಳಿ ಬರುವೆ ಎಂದು ನಿರ್ಧರಿಸಿದೆ. ಇಂದಿಗೆ ಐದು ದಿನವಾಯಿತು ನಿನ್ನ ಬಳಿ ಮಾತನಾಡಿ . ಮೊದಲೆಲ್ಲ ನಾವು ಎಷ್ಟೋ ಸಾರಿ ಜಗಳವಾಡಿದ್ದೆವು . ಆಗೆಲ್ಲ ನೀನು ಬಂದು ರಮಿಸಿ ಮುದ್ದು ಮಾತಾಡಿ , ನನಗಾಗಿ ದೊಡ್ಡ ರಸಿಕನಂತೆ ಹೊಸ ಕವಿತೆಗಳನ್ನು ಬರೆದು ಹೇಳುತ್ತಿದ್ದೆ . ಕವಿತೆಗಳಲ್ಲೇ ಬೇಡಿ ಮನಸು ಕರಗುವಂತೆ ಮಾಡುತ್ತಿದ್ದೆ. ಆದರೆ ಇಂದು ನನ್ನ ಮನಸ್ಸು ಕಲ್ಲಾದಂತೆ ನಿನ್ನ ಮನಸ್ಸು ಕಲ್ಲಾಗಿರಬೇಕು . ಅಥವಾ ನಾನು ನಿನಗೆ ಬೇಡವಾದೆನಾ ? ನಾನು ನಿನ್ನ ಎಷ್ಟು ಹಚ್ಚಿಕೊಂಡಿದ್ದೆ ಅಂತ ಈಗಲೇ ನನಗೆ ತಿಳಿದದ್ದು . ಪ್ರತೀ ದಿನ ಹತ್ತು ಸಾರಿ ನನ್ನ ಮೊಬೈಲ್ ಚೆಕ್ ಮಾಡುತ್ತೆನೆ . ಆದರೆ ನಿನ್ನ ಯಾವುದೇ ಮೆಸೇಜ್ ಬಂದಿರುವುದಿಲ್ಲ . ಮುದ್ದು ನಾನು ನಿಜವಾಗಿ ಪೆದ್ದು ಕಣೋ.. ಅಂದು ನಿನ್ನ ಮೇಲಿನ ಕೋಪದಿಂದ ನಿನ್ನ ಯಾವುದೇ ಮೆಸೇಜ್ ಬರದಂತೆ ನಾನು ನನ್ನ ಮೊಬೈಲ್ನಲ್ಲಿ ನಿನ್ನ ಬ್ಲಾಕ್ ಮಾಡಿದ್ದೆ. ಅದೂ ಸಹ ಮರೆತು ಹೋಗಿದೆ. ಆದರೆ ಆ ಬ್ಲಾಕ್ ತೆಗೆಯಲು ನನ್ನ ಸ್ವಾಭಿಮಾನ ಮತ್ತೆ ಅಡ್ಡ ಬರುತ್ತಿದೆ . ಆದರೂ ನಾನು ಏನು ಎಂದು ನಿನಗೆ ಚೆನ್ನಾಗಿ ಗೊತ್ತು. ನಿನ್ನ ಮಾತನಾಡದೇ ಐದು ದಿನ ಹೇಗೆ ಕಳೆದಿರಬಹುದು ಎಂಬ ಊಹೆ ನಿನಗೆ ಇರುತ್ತದೆ. ಇಲ್ಲ ಕಣೋ ನಾನು ಓದಿ ಬ್ಯಾಂಕ್ ಪರೀಕ್ಷೆಯಲ್ಲಿ ಒಳ್ಳೆಯ ಅಂಕ ತೆಗೆದು ಕೆಲಸ ಗಿಟ್ಟಿಸಿದ ಮೇಲೆಯೇ ನಿನಗೆ ಮುಖ ತೋರಿಸುವೆ . ಒಂದು ದುರ್ಬಲ ಏನು ಗೊತ್ತ . ಎಷ್ಟು ಗಟ್ಟಿ ಮನಸ್ಸು ಮಾಡಿದರೂ ನಿನ್ನ ನೆನಪು ಮಾತ್ರ ಮನದಿಂದ ದೂರಾಗುತ್ತಿಲ್ಲ . ನಿನ್ನ ನೆನಪು ಬಂದಾಗ ಹುಚ್ಚಿಯಂತೆ ಒಬ್ಬಳೇ ಕೂತು ಅತ್ತು ಬಿಡುತ್ತೇನೆ. ಬೇಕಿಲ್ಲ ಈ ಕೋಪ . ಓಡಿ ನಿನ್ನ ಬಳಿ ಬಂದು ಬಿಡಲೇ ಅಂತ ನೂರು ಸಾರಿ ಅಂದುಕೊಳ್ಳುತ್ತೇನೆ . ಆದರೆ ಆಗ ನಿನ್ನ ಮಾತು ನಿಜವಾಗಿ ಬಿಡುತ್ತದೆ . ನಾನು ಏನೂ ಸಾಧಿಸುವುದಿಲ್ಲ. ನಾನು ಸೋತು ಹೋಗುತ್ತೇನೆ ಎಂದು ನೆನೆದಾಗ ಮತ್ತೆ ನನ್ನ ಸ್ವಾಭಿಮಾನ ಎಚ್ಚರ ಗೊಳ್ಳುತ್ತದೆ. ದಯವಿಟ್ಟು ನನ್ನ ನೆನಪಿನಿಂದ ದೂರ ಹೋಗಿಬಿಡು . ನಿನ್ನ ದ್ವೇಷಿಸಲಂತೂ ಸಾಧ್ಯವಿಲ್ಲದ ಮಾತು. ಆದರೆ ಸ್ವಲ್ಪ ದಿನದ ಮಟ್ಟಿಗೆಯಾದರೂ ಈ ನರಕ ಯಾತನೆ ಅನುಭವಿಸಲೇ ಬೇಕಿದೆ. ನೀನು ನಾನು ಮತ್ತೆ ಸೇರುವ ಕಾಲ ಬರುವವರೆಗೂ ಈ ಡೈರಿನೇ ನನಗೆ ಗೆಳೆಯ. ನಿನ್ನ ಎಷ್ಟು ಮಿಸ್ ಮಾಡಿಕೊಂಡೆ ಎಂದು ನೀನು ಇದನ್ನು ಓದಿದಾಗ ತಿಳಿಯುತ್ತದೆ. ಅಂದು ನಾನೇ ಓದಲು ಕೊಡುತ್ತೇನೆ. ಅದುವರೆಗೂ ನೀನು ಕಾಯಲೇಬೇಕು . ನಿನ್ನ ಬಳಿ ನನ್ನ ಒಂದೇ ಬೇಡಿಕೆ ಕಣೋ. ನಾನು ಬರುವವರೆಗೂ ನನಗಾಗಿ ಕಾಯುವೆಯಾ ?? ಅಥವಾ ಎಲ್ಲಾ ಹುಡುಗರಂತೆ ನನ್ನ ಮರೆತು ಬೇರೆ ಹುಡುಗಿಯ ಬಳಿ ಹೋಗುವೆಯಾ ? ಹಾಗೇನಾದರೂ ಆದರೆ ನಿನ್ನ ಕೊಂದು ನಾನೂ ಸತ್ತು ಹೋಗುತ್ತೇನೆ ಕಣೋ ಇದು ನಿಜ . ©Yakshitha

#ಪ್ರೀತಿ  ನಿನಗೆ ಏನೂ ಆಗೊಲ್ಲ , ಹೇಳಿದ್ದು ಮಾಡಲ್ಲ . ಜೀವನ ನೀನು ಅಂದುಕೊಂಡಷ್ಟು ಸುಲಭವಲ್ಲ ..." 



ಹೀಗೆ ನೀನು ಮಾತು ಆಡುತ್ತಲೇ ಹೋದೆ . ನಿನ್ನ ಈ ಮಾತುಗಳು ಒಂದು ಸಾರಿ ಅಲ್ಲ ಈಗಾಗಲೇ ಹಲವು ಬಾರಿ ಹೇಳಿದ್ದೆ , ನಾನೂ ಕೇಳಿದ್ದೆ . 



ಸಮಯ ಒಂದೇ ತರಹ ಇರುವುದಿಲ್ಲ ಅಲ್ವಾ ? ಅವತ್ತು ನಿನ್ನ ಈ ಮಾತುಗಳು ನನಗೆ ಬಹಳವಾಗೇ ಮನಸ್ಸಿಗೆ ಚುಚ್ಚಿತ್ತು . 

ಸ್ವಾಭಿಮಾನದಿಂದ ಮನಸ್ಸು ಕುದ್ದಿತ್ತು . ಎರಡು ವರ್ಷದ ಸ್ನೇಹ, ಪ್ರೀತಿಯೂ ಬೇಡ ಅನ್ನಿಸಿದ್ದು ಆಗಲೇ ನೋಡು .  ನೀನು ನನಗೆ ಬರೀ ಗೆಳೆಯನಾಗಿರಲಿಲ್ಲ . ಗುರುವೂ ಆಗಿದ್ದೆ . ಪ್ರತೀ ಸಾರಿಯೂ ನಿನ್ನ ಪ್ರತಿಯೊಂದು ಮಾತಿಗೂ ನಾನು ಬೆಲೆ ಕೊಟ್ಟು ನೀ ಹೇಳಿದಂತೆ ಕೇಳಿದ್ದೆ . ಆತ್ಮ ವಿಶ್ವಾಸ ಬೆಳೆಸಿದವನು ನೀನು ಆದರೆ ನೀನೇ ಮತ್ತೆ ಮತ್ತೆ ಇಂಥ ಮಾತುಗಳು ಹೇಳಿದಾಗ ನಾನು ಸಹಿಸದಾದೆ.  ನಿನ್ನ ಬಳಿ ಇನ್ನು ಮಾತನಾಡಬಾರದು , ಯಾವಾಗ ನಾನು ನಿನ್ನ ಮಾರ್ಗದರ್ಶನ ಇಲ್ಲದೇ ಅಂದುಕೊಂಡದ್ದು ಸಾಧಿಸುವೆನೋ, ಆಗಲೇ ಮತ್ತೆ ನಿನ್ನ ಬಳಿ ಬರುವೆ ಎಂದು ನಿರ್ಧರಿಸಿದೆ. 



ಇಂದಿಗೆ ಐದು ದಿನವಾಯಿತು ನಿನ್ನ ಬಳಿ ಮಾತನಾಡಿ . ಮೊದಲೆಲ್ಲ ನಾವು ಎಷ್ಟೋ ಸಾರಿ ಜಗಳವಾಡಿದ್ದೆವು . ಆಗೆಲ್ಲ ನೀನು ಬಂದು ರಮಿಸಿ ಮುದ್ದು ಮಾತಾಡಿ , ನನಗಾಗಿ ದೊಡ್ಡ ರಸಿಕನಂತೆ ಹೊಸ ಕವಿತೆಗಳನ್ನು ಬರೆದು ಹೇಳುತ್ತಿದ್ದೆ . ಕವಿತೆಗಳಲ್ಲೇ ಬೇಡಿ ಮನಸು ಕರಗುವಂತೆ ಮಾಡುತ್ತಿದ್ದೆ.  ಆದರೆ ಇಂದು ನನ್ನ ಮನಸ್ಸು ಕಲ್ಲಾದಂತೆ ನಿನ್ನ ಮನಸ್ಸು ಕಲ್ಲಾಗಿರಬೇಕು .  ಅಥವಾ ನಾನು ನಿನಗೆ ಬೇಡವಾದೆನಾ ? 



ನಾನು ನಿನ್ನ ಎಷ್ಟು ಹಚ್ಚಿಕೊಂಡಿದ್ದೆ ಅಂತ ಈಗಲೇ ನನಗೆ ತಿಳಿದದ್ದು . ಪ್ರತೀ ದಿನ ಹತ್ತು ಸಾರಿ ನನ್ನ ಮೊಬೈಲ್ ಚೆಕ್ ಮಾಡುತ್ತೆನೆ . ಆದರೆ ನಿನ್ನ ಯಾವುದೇ ಮೆಸೇಜ್ ಬಂದಿರುವುದಿಲ್ಲ .  ಮುದ್ದು ನಾನು ನಿಜವಾಗಿ ಪೆದ್ದು ಕಣೋ.. ಅಂದು ನಿನ್ನ ಮೇಲಿನ ಕೋಪದಿಂದ ನಿನ್ನ ಯಾವುದೇ ಮೆಸೇಜ್ ಬರದಂತೆ ನಾನು ನನ್ನ ಮೊಬೈಲ್ನಲ್ಲಿ ನಿನ್ನ ಬ್ಲಾಕ್ ಮಾಡಿದ್ದೆ. ಅದೂ ಸಹ ಮರೆತು ಹೋಗಿದೆ.  ಆದರೆ ಆ ಬ್ಲಾಕ್ ತೆಗೆಯಲು ನನ್ನ ಸ್ವಾಭಿಮಾನ ಮತ್ತೆ ಅಡ್ಡ ಬರುತ್ತಿದೆ . ಆದರೂ ನಾನು ಏನು ಎಂದು ನಿನಗೆ ಚೆನ್ನಾಗಿ ಗೊತ್ತು. ನಿನ್ನ ಮಾತನಾಡದೇ ಐದು ದಿನ ಹೇಗೆ ಕಳೆದಿರಬಹುದು ಎಂಬ ಊಹೆ ನಿನಗೆ ಇರುತ್ತದೆ. 



ಇಲ್ಲ ಕಣೋ ನಾನು ಓದಿ ಬ್ಯಾಂಕ್ ಪರೀಕ್ಷೆಯಲ್ಲಿ ಒಳ್ಳೆಯ ಅಂಕ ತೆಗೆದು ಕೆಲಸ ಗಿಟ್ಟಿಸಿದ ಮೇಲೆಯೇ ನಿನಗೆ ಮುಖ ತೋರಿಸುವೆ . ಒಂದು ದುರ್ಬಲ ಏನು ಗೊತ್ತ . ಎಷ್ಟು ಗಟ್ಟಿ ಮನಸ್ಸು ಮಾಡಿದರೂ ನಿನ್ನ ನೆನಪು ಮಾತ್ರ ಮನದಿಂದ ದೂರಾಗುತ್ತಿಲ್ಲ . ನಿನ್ನ ನೆನಪು ಬಂದಾಗ ಹುಚ್ಚಿಯಂತೆ ಒಬ್ಬಳೇ ಕೂತು ಅತ್ತು ಬಿಡುತ್ತೇನೆ. 

ಬೇಕಿಲ್ಲ ಈ ಕೋಪ . ಓಡಿ ನಿನ್ನ ಬಳಿ ಬಂದು ಬಿಡಲೇ ಅಂತ ನೂರು ಸಾರಿ ಅಂದುಕೊಳ್ಳುತ್ತೇನೆ . 

ಆದರೆ ಆಗ ನಿನ್ನ ಮಾತು ನಿಜವಾಗಿ ಬಿಡುತ್ತದೆ . ನಾನು ಏನೂ ಸಾಧಿಸುವುದಿಲ್ಲ. ನಾನು ಸೋತು ಹೋಗುತ್ತೇನೆ ಎಂದು ನೆನೆದಾಗ ಮತ್ತೆ ನನ್ನ ಸ್ವಾಭಿಮಾನ ಎಚ್ಚರ ಗೊಳ್ಳುತ್ತದೆ. 

ದಯವಿಟ್ಟು ನನ್ನ ನೆನಪಿನಿಂದ ದೂರ ಹೋಗಿಬಿಡು .  ನಿನ್ನ ದ್ವೇಷಿಸಲಂತೂ ಸಾಧ್ಯವಿಲ್ಲದ ಮಾತು. ಆದರೆ ಸ್ವಲ್ಪ ದಿನದ ಮಟ್ಟಿಗೆಯಾದರೂ ಈ ನರಕ ಯಾತನೆ ಅನುಭವಿಸಲೇ ಬೇಕಿದೆ. 

ನೀನು ನಾನು ಮತ್ತೆ ಸೇರುವ ಕಾಲ ಬರುವವರೆಗೂ ಈ ಡೈರಿನೇ ನನಗೆ ಗೆಳೆಯ.  ನಿನ್ನ ಎಷ್ಟು ಮಿಸ್ ಮಾಡಿಕೊಂಡೆ ಎಂದು ನೀನು ಇದನ್ನು ಓದಿದಾಗ ತಿಳಿಯುತ್ತದೆ. 

ಅಂದು ನಾನೇ ಓದಲು ಕೊಡುತ್ತೇನೆ. ಅದುವರೆಗೂ ನೀನು ಕಾಯಲೇಬೇಕು . ನಿನ್ನ ಬಳಿ ನನ್ನ ಒಂದೇ ಬೇಡಿಕೆ ಕಣೋ. ನಾನು ಬರುವವರೆಗೂ ನನಗಾಗಿ ಕಾಯುವೆಯಾ ?? 

ಅಥವಾ ಎಲ್ಲಾ ಹುಡುಗರಂತೆ ನನ್ನ ಮರೆತು ಬೇರೆ ಹುಡುಗಿಯ ಬಳಿ ಹೋಗುವೆಯಾ ?  ಹಾಗೇನಾದರೂ ಆದರೆ ನಿನ್ನ ಕೊಂದು ನಾನೂ ಸತ್ತು ಹೋಗುತ್ತೇನೆ ಕಣೋ ಇದು ನಿಜ .

©Yakshitha

ಪ್ರೀತಿಯ ತುಣುಕು ಪ್ರೀತಿ ಪ್ರೀತಿಯ ಕಾಣಿಕೆ ಮೋಸದ ಪ್ರೀತಿ ಅಮ್ಮನ ಪ್ರೀತಿ

10 Love

White ನಾನ್ ಸ್ಟಾಪ್ ನವೆಂಬರ್ ಎಡಿಷನ್ - ಬಿಗಿನರ್ ನಗು ಮುಖದ ಮಗು ಚಂದ ಅಲ್ವಾ. ವಿಜಯ ಮತ್ತೆ ವಿನೂತ ಮದುವೆಯಾಗಿ ಎಂಟು ವರ್ಷಗಳು ಕಳೆದಿದ್ದವು. ಆಸ್ತಿ ಇತ್ತು, ಹಣ ಇತ್ತು, ಮಕ್ಕಳ ಭಾಗ್ಯಾ ಮಾತ್ರಾ ದೇವರು ಕರುಣಿಸಿರಲಿಲ್ಲ. ವಿನೂತಾ ಮಾಡದ ಪೂಜೆ ಇರಲಿಲ್ಲ, ಹರಕೆ ಕಟ್ಟದ ದೇವರುಗಳಿಲ್ಲ. ವಿಜಯ, ವಿನೂತಾ ತುಂಬಾ ಪ್ರೀತಿಸಿ ಮದುವೆಯಾದವರು. ಮಗುವಿನ ಬಗ್ಗೆ ವಿಜಯ ಅಷ್ಟಾಗಿ ಚಿಂತಿಸಿದವನಲ್ಲಾ. ನೀನೇ ಮ,ಗು ನಿನಗೇಕೆ ಮಗು ಬೇಕು ಅಂತಾ ಹೇಳುತ್ತಿದ್ದನು. ಅವನಿಗೆ ಅದೊಂದು ವಿಷಯವೇ ಅಲ್ಲಾ. ವಿನೂತಾ ಎಷ್ಟೇ ಸಮಾಧನವಾದರೂ ಒಂದು ಕಡೆ ಮಗುವಿಗಾಗಿ ಹಂಬಲಿಸುತ್ತಿದ್ದಳು. ಹೀಗೆ 15 ವರ್ಷಗಳೇ ಕಳೆಯಿತು. ಅದೊಂದು ದಿನ ಅವಳು ತಲೆ ಸುತ್ತು ಬಿದ್ದಳು. ಅವಳ ಗಂಡ ಸಿಟ್ಟಿನಿಂದ ಮಗು ಮಗು ಅಂತಾ ಚಿಂತೆ ಮಾಡಿ ಸರಿಯಾಗಿ ಉಣ್ಣುವುದ ಮರೆತೆ. ನಿನ್ನಾ ದೇಹದಲ್ಲಿ ಏನು ಶಕ್ತಿ ಇದೆ ನೋಡು ಹೇಗಾಗಿದಿಯಾ ಅಂತಾ ಬಯ್ಯುತ್ತಾ ಹೊತ್ತುಕೊಂಡು ಹೋಗಿ ಮಲಗಿಸಿ ಮನೆಗೆ ಪರಿಮಳ ಡಾಕ್ಟರ ಕರೆಸಿದನು. ಅವಳನ್ನು ಪರೀಕ್ಷಿಶಿ ಅವಳು ತಾಯಿಯಾಗುತ್ತಿದ್ದಾಳು. ಇದೆಲ್ಲಾ ಮೊದಲು ಹೀಗಾಗತ್ತೆ ನೀವು ಇವರನ್ನಾ ಚನ್ನಾಗಿ ನೋಡಿಕೊಳ್ಳಬೇಕು ಅಂತಾ ಹೇಳಿದಾಗ ಅವರಿಬ್ಬರ ಮುಖದಲ್ಲಿ ಕಂಡ ಆ ಸಂತೋಷದ ನಗು ಎಂದು ಮರೆಯದ ನಗು. ©Yakshitha

#ಪ್ರೀತಿ #Sad_Status  White ನಾನ್ ಸ್ಟಾಪ್ ನವೆಂಬರ್ ಎಡಿಷನ್ - ಬಿಗಿನರ್



ನಗು ಮುಖದ ಮಗು ಚಂದ ಅಲ್ವಾ.

ವಿಜಯ ಮತ್ತೆ ವಿನೂತ ಮದುವೆಯಾಗಿ ಎಂಟು ವರ್ಷಗಳು ಕಳೆದಿದ್ದವು. ಆಸ್ತಿ ಇತ್ತು, ಹಣ ಇತ್ತು, ಮಕ್ಕಳ ಭಾಗ್ಯಾ ಮಾತ್ರಾ ದೇವರು ಕರುಣಿಸಿರಲಿಲ್ಲ. ವಿನೂತಾ ಮಾಡದ ಪೂಜೆ ಇರಲಿಲ್ಲ, ಹರಕೆ ಕಟ್ಟದ ದೇವರುಗಳಿಲ್ಲ.

ವಿಜಯ, ವಿನೂತಾ ತುಂಬಾ ಪ್ರೀತಿಸಿ ಮದುವೆಯಾದವರು. ಮಗುವಿನ ಬಗ್ಗೆ ವಿಜಯ ಅಷ್ಟಾಗಿ ಚಿಂತಿಸಿದವನಲ್ಲಾ. ನೀನೇ ಮ,ಗು ನಿನಗೇಕೆ ಮಗು ಬೇಕು ಅಂತಾ ಹೇಳುತ್ತಿದ್ದನು.  ಅವನಿಗೆ ಅದೊಂದು ವಿಷಯವೇ ಅಲ್ಲಾ. ವಿನೂತಾ ಎಷ್ಟೇ ಸಮಾಧನವಾದರೂ ಒಂದು ಕಡೆ ಮಗುವಿಗಾಗಿ ಹಂಬಲಿಸುತ್ತಿದ್ದಳು. ಹೀಗೆ 15 ವರ್ಷಗಳೇ ಕಳೆಯಿತು.

ಅದೊಂದು ದಿನ ಅವಳು ತಲೆ ಸುತ್ತು ಬಿದ್ದಳು.

ಅವಳ ಗಂಡ ಸಿಟ್ಟಿನಿಂದ ಮಗು ಮಗು ಅಂತಾ ಚಿಂತೆ ಮಾಡಿ ಸರಿಯಾಗಿ ಉಣ್ಣುವುದ ಮರೆತೆ. ನಿನ್ನಾ ದೇಹದಲ್ಲಿ ಏನು ಶಕ್ತಿ ಇದೆ ನೋಡು ಹೇಗಾಗಿದಿಯಾ ಅಂತಾ ಬಯ್ಯುತ್ತಾ ಹೊತ್ತುಕೊಂಡು ಹೋಗಿ ಮಲಗಿಸಿ ಮನೆಗೆ ಪರಿಮಳ ಡಾಕ್ಟರ ಕರೆಸಿದನು. ಅವಳನ್ನು ಪರೀಕ್ಷಿಶಿ ಅವಳು ತಾಯಿಯಾಗುತ್ತಿದ್ದಾಳು. ಇದೆಲ್ಲಾ ಮೊದಲು ಹೀಗಾಗತ್ತೆ ನೀವು ಇವರನ್ನಾ ಚನ್ನಾಗಿ ನೋಡಿಕೊಳ್ಳಬೇಕು ಅಂತಾ ಹೇಳಿದಾಗ ಅವರಿಬ್ಬರ ಮುಖದಲ್ಲಿ ಕಂಡ ಆ ಸಂತೋಷದ ನಗು ಎಂದು ಮರೆಯದ ನಗು.

©Yakshitha

#Sad_Status

12 Love

ಕನ್ನಡ ಫೀಡ್ ಲೈಬ್ರರಿ ಬರೆಯಿರಿ ಅಧಿಸೂಚನೆ ಪ್ರೊಫೈಲ್ Vijaya Bharathi Romance Classics Thriller 4.7 ಶ್ರಾವಣ ಸಂಜೆ 3 mins 309 Kannada Story : #795 Kannada Story Romance : #95 ಕುಂಭದ್ರೋಣ ರಾತ್ರಿ ಶ್ರಾವಣ ಸಂಜೆ ಮಳೆಗಾಲದ ಆ ಸಂಜೆಯಲ್ಲಿ ಆಫೀಸ್ ನಿಂದ ಮನೆಗೆ ಹೊರಡುವ ಸಮಯಕ್ಕೆ ಸರಿಯಾಗಿ ಆಕಾಶ ದಲ್ಲಿ ದಟ್ಟವಾದ ಕಾರ್ಮೋಡಗಳು ಕವಿದು, ಇನ್ನೊಂದು ಅರೆಕ್ಷಣ ದಲ್ಲಿ ಜೋರಾಗಿ ಮಳೆ ಸುರಿಯಬಹುದೆಂಬ ಸೂಚನೆಯನ್ನು ನೀಡಿದಾಗ, ಸರಸರನೆ ಮನೆಗೆ ಹೊರಟ ಆರಭಿ,ಆಫೀಸಿನಿಂದ ಹೊರಗೆ ಬಂದು ತನ್ನ ಆಕ್ಟವ(activa)ಗಾಡಿಯತ್ತ ದೌಡಾಯಿಸಿದಳು. 'ಸಧ್ಯ,ಮಳೆ ಪ್ರಾರಂಭವಾಗುವ ಮೊದಲು ಮನೆ ಸೇರಿಬಿಡಬೇಕೆಂದು 'ಯೋಚಿಸುತ್ತಾ, ಗಾಡಿ ಸ್ಟಾರ್ಟ್ ಮಾಡಿ, ಆಕ್ಸಿಲರೇಟರ್ ಹೆಚ್ಚಿಸಿದಳು.ಒಂದೆರಡು ಕಿ.ಮೀ. ಸಾಗಿದೆ ನಂತರ ಟಪಟಪನೆ ಶುರುವಾದ ಮಳೆ ಜೋರಾದಾಗ, ವಿಧಿಯಿಲ್ಲದೆ ಒಂದು ಕಡೆ ನಿಂತಳು. ಮಳೆ ನಿಲ್ಲುವುದನ್ನೇ ಕಾಯುತ್ತಿದ್ದ ಅವಳಿಗೆ ನಿರಾಸೆ ಯಾಯಿತು.ಸುಮಾರು ಅರ್ಧ ಗಂಟೆ ಕಳೆದರೂ ,ಮಳೆ ಕಡಿಮೆ ಯಾಗುವ ಸೂಚನೆ ಕಾಣಲಿಲ್ಲ.ಜೊತೆಗೆ ಸುತ್ತಲೂ ಕತ್ತಲೆ ಆವರಿಸತೊಡಗಿತು.ಶ್ರಾವಣದ ಸಂಜೆಯ ಮಳೆ, ಜೋರಾಗುತ್ತದೆಯೇ ವಿನಾ ಕಡಿಮೆ ಯಾಗುವ ಸಂಭವ ಕಡಿಮೆ ಎಂದುಕೊಂಡ ಆರಭಿ,ಮಳೆ ಸ್ವಲ್ಪ ಕಡಿಮೆ ಯಾದಾಗ,ಜರ್ಕಿನ್ ಧರಿಸಿ ಗಾಡಿ ಸ್ಟಾರ್ಟ್ ಮಾಡಿದಳು.ಸುಮಾರು ಎಂಟು ಕಿ.ಮೀ.ದೂರವಿರುವ ಅವಳ ಮನೆ ಸೇರಲು ಕನಿಷ್ಠ ಅರ್ಧ ಗಂಟೆ ಯಾದರೂ ಬೇಕಾಗಿತ್ತು.ಹೀಗಾಗಿ ಮಳೆಯಲ್ಲೇ ಹೊರಟಳು. ನಿಧಾನವಾಗಿ ಗಾಡಿ ಓಡಿಸಿಕೊಂಡು, ಅಂತೂ ಇಂತೂ ಮನೆ ಸೇರುವ ವೇಳೆಗೆ ಅವಳಿಗೆ ಸಾಕಾಗಿ ಹೋಗಿತ್ತು.ಗಾಡಿ ನಿಲ್ಲಿಸಿ,ಮನೆಯ ಕೀ ತೆಗೆದು ,ಒಳಗೆ ಸೇರಿದಾಗ 'ಅಬ್ಬಾ,ಸುರಕ್ಷಿತ ವಾಗಿ ಮನೆ ಸೇರಿದನಲ್ಲ', ಎಂದು ಕೊಂಡು ನಿಟ್ಟುಸಿರು ಬಿಟ್ಟಳು.ಸುತ್ತಲೂ ಕತ್ತಲು ಇದ್ದುದರಿಂದ ಸ್ವಿಚ್ ಅದುಮಿದಳು.ಲೈಟ್ ಹತ್ತದಿದ್ದುದರಿಂದ, ಅವಳಿಗೆ ಕರೆಂಟ್ ಇಲ್ಲದಿರುವುದು ತಿಳಿಯಿತು.ಯು.ಪಿ.ಎಸ್.ಕಡೆ ಗಮನ ಹರಿದು, ಅದರ ಸ್ವಿಚ್ ಆನ್ ಮಾಡಲು ಅತ್ತ ಕಡೆ ನಡೆದಾಗ, ಯುಪಿ.ಎಸ್.ರಿಪೇರಿಗೆ ಹೋಗಿರುವುದು ನೆನಪಿಗೆ ಬಂತು.ಮನೆಯ ಹೊರಗಡೆ ಗುಡುಗು ಸಿಡಿಲು ಮಿಂಚು ಗಳಿಂದ ಕೂಡಿದ ಕುಂಭದ್ರೋಣ ಮಳೆ ,ಒಳಗಡೆ ಕರೆಂಟ್ ಇಲ್ಲದೆ ಕಗ್ಗತ್ತಲು.ಕಡೆಗೆ ಅವಳು ಕತ್ತಲಲ್ಲೇ ತಡಕಾಡಿ ಟಾರ್ಚಗಾಗಿ ಹುಡುಕಾಟ ನಡೆಸಿ, ಟಾರ್ಚ್ ತಂದು ಆನ್ ಮಾಡಿದಾಗ, ಅದೂ ಕೂಡ ಹತ್ತಲಿಲ್ಲ.ಬಹುಶಹ ಟಾರ್ಚ್ ನ ಶೆಲ್ ಗಳು ವೀಕ್ ಆಗಿರಬಹುದು.ಇತ್ತೀಚೆಗೆ ಯು.ಪಿ.ಎಸ್ ಮನೆಗೆ ಬಂದ ಮೇಲೆ ಟಾರ್ಚ್ ಅಥವಾ, ಮೋಂಬತ್ತಿ ಯ ಕಡೆ ಗಮನ ಕೊಟ್ಟಿರಲಿಲ್ಲ.ಹೀಗಾಗಿ ಇಂತಹ ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ ಎಂದು ಕೊಂಡ ಆರಭಿ,ಮೊಬೈಲ್ ಬೆಳಕಿನ ಸಹಾಯದಿಂದ ಅಡುಗೆ ಮನೆಗೆ ಹೋಗಿ ಮೋಂಬತ್ತಿ ಗಾಗಿ ಹುಡುಕಾಡಿದಾಗ, ಕಡೆಗೂ ಒಂದು ಸಣ್ಣ ಮೋಂಬತ್ತಿ ಸಿಕ್ಕಿದಾಗ, ಅವಳಿಗೆ ನೀರಲ್ಲಿ ಮುಳುಗುತ್ತಿರುವವನಿಗೆ ಆಸರೆಯಾಗಿ ಹುಲ್ಲುಕಡ್ಡಿಸಿಕ್ಕಿದಂತಾಯಿತು.ಮೋಂಬತ್ತಿ ಹಚ್ಚಿ ಅಲ್ಲಿಯೇ ಇದ್ದ ಟೀಪಾಯಿ ಮೇಲೆ ಅದನ್ನು ನಿಲ್ಲಿಸಿ ,ಒದ್ದೆ ಬಟ್ಟೆ ಗಳನ್ನು ಬದಲಾಯಿಸಿ ಕೊಂಡು, ಒಂದು ಕಪ್ ಕಾಫಿ ಬೆರೆಸಿಕೊಂಡು ಉಸ್ಸಪ್ಪಾ ಎನ್ನುತ್ತಾ ಸೋಫಾದಲ್ಲಿ ಕುಳಿತಳು. ಇದ್ದಕ್ಕಿದ್ದಂತೆ ಅವಳ ಗಮನ ಮನೆಯ ಬಾಗಿಲ ಕಡೆ ಹರಿದು, ಅನುಮಾನವಾಗಿ, ಕತ್ತಲಲ್ಲೇ ಹೆದರುತ್ತಾ ಬಾಗಿಲ ಹತ್ತಿರ ಹೋಗಿ, ಅದು ಲಾಕ್ ಆಗಿರುವುದನ್ನು ದೃಢ ಪಡಿಸಿಕೊಂಡು ಕುಳಿತಳು.ಮೋಂಬತ್ತಿ ಹಾಗೂ ಮೊಬೈಲ್ ನ ಬೆಳಕಿನ ಸಹಾಯದಿಂದ ಕಾಫಿ ಕುಡಿಯುತ್ತಿದ್ದಾಗ , ಅವಳಿಗೆ ಇಂದು ತನ್ನ ಗಂಡ ಅರುಣ್ ಕೆಲಸದ ಮೇಲೆ ಹೈದರಾಬಾದ್ ಗೆ ಹೋಗಿರುವುದು ನೆನಪಾಯಿತು."ಅಯ್ಯೋ, ಇಂದು ಅರುಣ್ ಬೇರೆ ಊರಲ್ಲಿಲ್ಲ,ಮಳೆಯ ಅಬ್ಬರ ಬೇರೆ, ಒಂದು ವೇಳೆ ಕರೆಂಟ್ ಬರದಿದ್ದರೆ?,"ಅರುಣ್ ಇರದ ಈ ರಾತ್ರಿ ಯನ್ನು ಕಲ್ಪಿಸಿಕೊಂಡು ಸಣ್ಣ ಗೆ ನಡುಗತೊಡಗಿದಳು.ಅವಳನ್ನು ಮೆಲ್ಲ ಮೆಲ್ಲನೆ ಭಯ ಆವರಿಸತೊಡಗಿತು. ಹಾಗೇ ಕಣ್ಮುಚ್ಚಿ ಕುಳಿತಾಗ, ಅವಳಿಗೆ ಅರುಣ್ ನ ನೆನಪಾಯಿತು.ಅವನೊಂದಿಗಾದರೂ ಮಾತನಾಡುತ್ತಾ ಮನಸ್ಸನ್ನು ಹಗುರ ಮಾಡಿಕೊಳ್ಳಬೇಕೆನ್ನುತ್ತಾ, ಮೊಬೈಲ್ ಕೈಗೆತ್ತಿಕೊಂಡಾಗ,ಅದರ ಚಾರ್ಜ್ ಕಡಿಮೆಯಾಗಿದ್ದರಿಂದ ಆಫ್ ಆಗಿ ಹೋಯ್ತು. ಸಿಟ್ಟಿನಿಂದ ಅದನ್ನು ದೂರ ತಳ್ಳಿದಳು.ಕ್ಯಾಂಡಲ್ ಮೆಲ್ಲ ಮೆಲ್ಲನೆ ಕರೆಗುತ್ತಿತ್ತು.ಇನ್ನೂ ಕರೆಂಟ್ ಬಂದಿಲ್ಲ,ಮಳೆ ಸುರಿಯುತ್ತಲೇ ಇರುವುದನ್ನು ಇತ್ತು.ಒಂದು ವೇಳೆ ಕರೆಂಟ್ ಬರುವುದು ಇನ್ನೂ ತಡವಾದರೆ ಮುಂದೇನು? ಅವಳಿಗೆ ಯೋಚನೆ ಯಾಯಿತು.ಸೀದಾ ದೇವರ ಕೋಣೆಗೆ ಹೋಗಿ ಎರಡು ಕಂಬಗಳಿಗೆ ಭರ್ತಿ ಎಣ್ಣೆ ತುಂಬಿಸಿ, ದೇವರ ದೀಪಗಳನ್ನು ಬೆಳಗಿಸಿ , ದೇವರಲ್ಲಿ "ಬೇಗ ಕರೆಂಟ್ಬರಲಪ್ಪ"ಎಂದುಮೊರೆಯಿಟ್ಟಳು.ಇಷ್ಟೆಲ್ಲಾ ಫಜೀತಿ ಗಳಲ್ಲಿ ಆರಭಿಗೆ ಹೊಟ್ಟೆ ಯ ಕಡೆ ಗಮನ ಹೋಗಿರಲಿಲ್ಲ.ಆದರೆ ಈಗ ಅವಳ ಹೊಟ್ಟೆ ಚುರುಗುಟ್ಟತೊಡಗಿದಾಗ,ಅಡುಗೆ ಮನೆಗೆ ಹೋಗಿಬಿಸ್ಕತ್ ಬ್ರೆಡ್ ಗಳನ್ನು ತಿಂದು, ನೀರು ಕುಡಿದುತನ್ನ ರೂಂ ಗೆ ಹೋಗಿ, ಮುಸುಕು ಬೀರಿ ಮಲಗಿದಳು. ಅವಳ ಮನಸ್ಸು ದೇಹಗಳು ಅರುಣ್ ನನ್ನು ಬಯಸಿತ್ತು.ಮದುವೆಯಾಗಿ ಇನ್ನೂ ಆರು ತಿಂಗಳು ಕಳೆದಿದ್ದು,ಇದೇ ಮೊದಲ ಬಾರಿಗೆ ಅರುಣ್ ಕೆಲಸದ ಮೇಲೆ ಹೈದರಾಬಾದ್ ಗೆ ಹೋಗಿ ದ್ದ.ಸಹಜವಾಗಿ ಆರಭಿಗೆ ಗಂಡನ ನೆನಪಾಗಿ ,ಅವನ ನೆನಪುಗಳಲ್ಲಿ ಮುಳುಗಿ, ಕನಸಿನ ಲೋಕಕ್ಕೆ ಜಾರಿದಳು. ಒಂದರ್ಧ ಗಂಟೆ ಕಳೆದಿರಬೇಕು,ನಿದ್ರೆಗೆ ಜಾರುತ್ತಿದ್ದ ಆರಭಿಗೆ ಬಾಗಿಲು "ಧಬ ಧಬ "ಬಡಿಯುವ ಶಬ್ದ ಕೇಳಿಸಿ, ಕನಸಿನ ಲೋಕದಿಂದ ವಾಸ್ತವ ಕ್ಕೆ ಬಂದು ಕಣ್ಣು ಬಿಟ್ಟಳು.ಇದು ಕನಸೋ ನನಸೋ ಎಂಬ ಅನುಮಾನದಲ್ಲಿ ಮೈಯ್ಯೆಲ್ಲಾ ಕಿವಿಯಾಗಿಸಿಕೊಂಡು ಸುತ್ತಲೂ ಕಣ್ಣಾಡಿಸಿದಳು.ಕ್ಯಾಂಡಲ್ ದೀಪ ಆಫ್ ಆಗಿತ್ತು.ದೇವರ ಮನೆಯ ದೀಪ ಬೆಳಗುತ್ತಿತ್ತು ಹಾಳಾದ್ದು ಕರೆಂಟ್ಇನ್ನೂಬಂದಿರಲಿಲ್ಲ. ಕೆ.ಇ.ಬಿ.ಯವರಿಗೆ ಶಾಪ ಹಾಕಿ ದಳು.ಸ್ವಲ್ಪ ಸಮಯದ ನಂತರ ಮತ್ತೆ ಬಾಗಿಲು ಬಡಿಯುವ ಶಬ್ದ ಕೇಳಿದಾಗ, ಹೆದರಿಕೆಯಿಂದ ನಡುಗತೊಡಗಿದಳು. ಯಾರೆಂದು ಕೇಳಲು ಬಾಯಿ ಬರುತ್ತಿಲ್ಲ,ನೋಡಲು ಧೈರ್ಯ ವಾಗುತ್ತಿಲ್ಲ.ಏನು‌ಮಾಡಬೇಕೆಂದು ತಿಳಿಯದೆಮತ್ತೆ ಹೊದ್ದಿಗೆ ಹೊದ್ದು ಮುಸುಕು ಬೀರಿ ಮಲಗಿದಳು. ಆದರೆ,‌ಬಾಗಿಲು ಬಡಿಯುವ ಶಬ್ದ ಕೇಳುತ್ತಲೇ ಇತ್ತು.ಎದ್ದು ಹೋಗಿ ನೋಡಲು ಭಯ, ಹಾಗೆ ಮಲಗೋಣವೆಂದರೆ ನಿದ್ರೆ ಬರುತ್ತಿಲ್ಲ.ಸ್ವಲ್ಪ ಹೊತ್ತು ಬಾಗಿಲು ಬಡಿಯುವ ಶಬ್ದ ನಿಂತಾಗ, ಅವಳಿಗೆ ಸಮಾಧಾನ ವಾಯಿತು.ಆದರೆ ಮಳೆಯ ಶಬ್ದ ನಿರಂತರವಾಗಿ ತ್ತು.ಇನ್ನೂ ಕರೆಂಟ್ ಬಂದಿಲ್ಲ.ಅವಳಿಗೆ ಚಿಂತೆ ಕಾಡಿತು.ಮತ್ತೆ ಬಾಗಿಲು ಬಡಿಯುವ ಶಬ್ದ ಕೇಳಿದಾಗ, ಕಿಟಕಿಯಲ್ಲಿ ಇಣುಕಿ ನೋಡಿದಳು.ಅವಳಿಗೆ ಯಾರೂ ಕಾಣಲಿಲ್ಲ.ದೇವರ ಕೋಣೆಗೆ ಹೋಗಿ ಮತ್ತಷ್ಟು ಎಣ್ಣೆ ತುಂಬಿಸಿ ದೀಪ ಆರದಂತೆ ಮಾಡಿದಳು.ತುಂಬಾ ಹೆದರಿ ಕೆಯಾಗಿ ಮುಸುಕೆಳೆದುಗಟ್ಟಿಯಾಗಿ ಕಣ್ಣು ಮುಚ್ಚಿ ಮಲಗಿದಳು.ಯಾರಾದರೂ ಇರಲಿ ಈ ಅವೇಳೆಯಲ್ಲಿ , ಕರೆಂಟ್ ಇಲ್ಲದೆ ಒಬ್ಬಳೇ ಇರುವಾಗ ಬಾಗಿಲು ತೆರೆಯುವುದು ಸರಿಯಿಲ್ಲ ವೆಂದು ಅವಳು ಗಟ್ಟಿಯಾಗಿ ನಿರ್ಧಾರ ಮಾಡಿ,ನಿದ್ರೆಗೆ ಜಾರಿದಳು. ಹೊರಗಿನಿಂದ ಬಾಗಿಲು ಬಡಿದು ಬಡಿದು ಸಾಕಾಗಿ ಹೋಗಿದೆ ಅರುಣ್ ಹುಯ್ಯುವ ಮಳೆಯಲ್ಲೇ ಮನೆಯ ಮುಂದೆ ಯೇ ಬಾಗಿಲಿಗೆ ಒರಗಿ ನಿದ್ದೆ ಹೋದ. ಅಂತೂ ಇಂತೂ ರಾತ್ರಿ ಕಳೆದು ಬೆಳಗಾಯಿತು. ನಿದ್ರೆ ಯಿಂದ ಎಚ್ಚರ ಗೊಂಡಾಗ,ಮಳೆನಿಂತಿರುವುದನ್ನು ಕಂಡು ಆರಭಿ ಸಮಾಧಾನದ ನಿಟ್ಟುಸಿರು ಬಿಟ್ಟು, ಹಾಸಿಗೆಯಿಂದ ಎದ್ದಳು.ರಂಗೋಲಿ ಹಾಕುವುದಕ್ಕೆ ಮನೆಯ ಮುಂಬಾಗಿಲನ್ನು ತೆಗೆದಾಗ,.ಹೊಸಿಲ ಬಳಿ ಕಾಲು ಚಾಚಿ ಮಲಗಿರುವ ಅರುಣ್ ನ ಕಂಡುಆಶ್ಚರ್ಯ ವಾಯಿತು.ಅಂದರೆ ರಾತ್ರಿ ಬಾಗಿಲು ಬಡಿದಿದ್ದು ಅರುಣ್ ಎಂದು ಗೊತ್ತಾದಾಗ, ಅವಳಿಗೆ ಪಶ್ಚಾತ್ತಾಪ ವಾಯಿತು.ಅವನನ್ನು ಮುಟ್ಟಿ ಎಬ್ಬಿಸಿ ಸಂಜೆ ಯಿಂದ ತಾನು ಮಳೆಯಿಂದ ತಾನು ತಲ್ಲಣಗೊಂಡಿದ್ದನ್ನು ಗಂಡನಿಗೆ ವಿವರಿಸಿ,"ಸಾರಿ" ಎಂದು ಕೇಳಿದರೆ,."ಹವಾಮಾನ ವೈಪರೀತ್ಯ ದಿಂದ ತನ್ನ ಫ್ಲೈಟ್ ಕ್ಯಾನ್ಸಲ್ ಆಗಿ,ಮಳೆಯ ಕಾರಣದಿಂದ ಮನೆಗೆ ಬರುವುದು ತಡವಾಯಿತು,ನೀನು ರಾತ್ರಿ ತೆಗೆದು ಕೊಂಡ ನಿರ್ಧಾರ ಸರಿಯಾಗಿಯೇ ಇದೆ "ಎಂದು ಹೇಳುತ್ತಾ ಹೆಂಡತಿ ಯನ್ನು ಸಮಾಧಾನ ಪಡಿಸುತ್ತಾ ಅರುಣ್ ಒಳಗೆ ಬಂದ. ಶ್ರಾವಣ ಸಂಜೆಯ ಕುಂಭದ್ರೋಣ ಮಳೆಯ ಈ ಅನುಭವ ಅವರಿಬ್ಬರ ಜೀವನದ ಮರೆಯಲಾಗದ ನೆನಪುಗಳಾದವು. ©Yakshitha

#ಪ್ರೀತಿ #795  ಕನ್ನಡ
 

ಫೀಡ್	
ಲೈಬ್ರರಿ	
ಬರೆಯಿರಿ	
ಅಧಿಸೂಚನೆ	
ಪ್ರೊಫೈಲ್

Vijaya Bharathi

Romance Classics Thriller

4.7  
ಶ್ರಾವಣ ಸಂಜೆ
	3 mins 	309
Kannada Story : #795
Kannada Story Romance : #95
 ಕುಂಭದ್ರೋಣ   ರಾತ್ರಿ   ಶ್ರಾವಣ ಸಂಜೆ 



ಮಳೆಗಾಲದ ಆ ಸಂಜೆಯಲ್ಲಿ ಆಫೀಸ್ ನಿಂದ ಮನೆಗೆ ಹೊರಡುವ ಸಮಯಕ್ಕೆ ಸರಿಯಾಗಿ ಆಕಾಶ ದಲ್ಲಿ ದಟ್ಟವಾದ ಕಾರ್ಮೋಡಗಳು ಕವಿದು, ಇನ್ನೊಂದು ಅರೆಕ್ಷಣ ದಲ್ಲಿ ಜೋರಾಗಿ ಮಳೆ ಸುರಿಯಬಹುದೆಂಬ ಸೂಚನೆಯನ್ನು ನೀಡಿದಾಗ, ಸರಸರನೆ ಮನೆಗೆ ಹೊರಟ ಆರಭಿ,ಆಫೀಸಿನಿಂದ ಹೊರಗೆ ಬಂದು ತನ್ನ ಆಕ್ಟವ(activa)ಗಾಡಿಯತ್ತ ದೌಡಾಯಿಸಿದಳು. 'ಸಧ್ಯ,ಮಳೆ ಪ್ರಾರಂಭವಾಗುವ ಮೊದಲು ಮನೆ ಸೇರಿಬಿಡಬೇಕೆಂದು 'ಯೋಚಿಸುತ್ತಾ, ಗಾಡಿ ಸ್ಟಾರ್ಟ್ ಮಾಡಿ, ಆಕ್ಸಿಲರೇಟರ್ ಹೆಚ್ಚಿಸಿದಳು.ಒಂದೆರಡು ಕಿ.ಮೀ. ಸಾಗಿದೆ ನಂತರ ಟಪಟಪನೆ ಶುರುವಾದ ಮಳೆ ಜೋರಾದಾಗ, ವಿಧಿಯಿಲ್ಲದೆ ಒಂದು ಕಡೆ ನಿಂತಳು. ಮಳೆ ನಿಲ್ಲುವುದನ್ನೇ ಕಾಯುತ್ತಿದ್ದ ಅವಳಿಗೆ ನಿರಾಸೆ ಯಾಯಿತು.ಸುಮಾರು ಅರ್ಧ ಗಂಟೆ ಕಳೆದರೂ ,ಮಳೆ ಕಡಿಮೆ ಯಾಗುವ ಸೂಚನೆ ಕಾಣಲಿಲ್ಲ.ಜೊತೆಗೆ ಸುತ್ತಲೂ ಕತ್ತಲೆ ಆವರಿಸತೊಡಗಿತು.ಶ್ರಾವಣದ ಸಂಜೆಯ ಮಳೆ, ಜೋರಾಗುತ್ತದೆಯೇ ವಿನಾ ಕಡಿಮೆ ಯಾಗುವ ಸಂಭವ ಕಡಿಮೆ ಎಂದುಕೊಂಡ ಆರಭಿ,ಮಳೆ ಸ್ವಲ್ಪ ಕಡಿಮೆ ಯಾದಾಗ,ಜರ್ಕಿನ್ ಧರಿಸಿ ಗಾಡಿ ಸ್ಟಾರ್ಟ್ ಮಾಡಿದಳು.ಸುಮಾರು ಎಂಟು ಕಿ.ಮೀ.ದೂರವಿರುವ ಅವಳ ಮನೆ ಸೇರಲು ಕನಿಷ್ಠ ಅರ್ಧ ಗಂಟೆ ಯಾದರೂ ಬೇಕಾಗಿತ್ತು.ಹೀಗಾಗಿ ಮಳೆಯಲ್ಲೇ ಹೊರಟಳು. ನಿಧಾನವಾಗಿ ಗಾಡಿ ಓಡಿಸಿಕೊಂಡು, ಅಂತೂ ಇಂತೂ ಮನೆ ಸೇರುವ ವೇಳೆಗೆ ಅವಳಿಗೆ ಸಾಕಾಗಿ ಹೋಗಿತ್ತು.ಗಾಡಿ ನಿಲ್ಲಿಸಿ,ಮನೆಯ ಕೀ ತೆಗೆದು ,ಒಳಗೆ ಸೇರಿದಾಗ 'ಅಬ್ಬಾ,ಸುರಕ್ಷಿತ ವಾಗಿ ಮನೆ ಸೇರಿದನಲ್ಲ', ಎಂದು ಕೊಂಡು ನಿಟ್ಟುಸಿರು ಬಿಟ್ಟಳು.ಸುತ್ತಲೂ ಕತ್ತಲು ಇದ್ದುದರಿಂದ ಸ್ವಿಚ್ ಅದುಮಿದಳು.ಲೈಟ್ ಹತ್ತದಿದ್ದುದರಿಂದ, ಅವಳಿಗೆ ಕರೆಂಟ್ ಇಲ್ಲದಿರುವುದು ತಿಳಿಯಿತು.ಯು.ಪಿ.ಎಸ್.ಕಡೆ ಗಮನ ಹರಿದು, ಅದರ ಸ್ವಿಚ್ ಆನ್ ಮಾಡಲು ಅತ್ತ ಕಡೆ ನಡೆದಾಗ, ಯುಪಿ.ಎಸ್.ರಿಪೇರಿಗೆ ಹೋಗಿರುವುದು ನೆನಪಿಗೆ ಬಂತು.ಮನೆಯ ಹೊರಗಡೆ ಗುಡುಗು ಸಿಡಿಲು ಮಿಂಚು ಗಳಿಂದ ಕೂಡಿದ ಕುಂಭದ್ರೋಣ ಮಳೆ ,ಒಳಗಡೆ ಕರೆಂಟ್ ಇಲ್ಲದೆ ಕಗ್ಗತ್ತಲು.ಕಡೆಗೆ ಅವಳು ಕತ್ತಲಲ್ಲೇ ತಡಕಾಡಿ ಟಾರ್ಚಗಾಗಿ ಹುಡುಕಾಟ ನಡೆಸಿ, ಟಾರ್ಚ್ ತಂದು ಆನ್ ಮಾಡಿದಾಗ, ಅದೂ ಕೂಡ ಹತ್ತಲಿಲ್ಲ.ಬಹುಶಹ ಟಾರ್ಚ್ ನ ಶೆಲ್ ಗಳು ವೀಕ್ ಆಗಿರಬಹುದು.ಇತ್ತೀಚೆಗೆ ಯು.ಪಿ.ಎಸ್ ಮನೆಗೆ ಬಂದ ಮೇಲೆ ಟಾರ್ಚ್ ಅಥವಾ, ಮೋಂಬತ್ತಿ ಯ ಕಡೆ ಗಮನ ಕೊಟ್ಟಿರಲಿಲ್ಲ.ಹೀಗಾಗಿ ಇಂತಹ ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ ಎಂದು ಕೊಂಡ ಆರಭಿ,ಮೊಬೈಲ್ ಬೆಳಕಿನ ಸಹಾಯದಿಂದ ಅಡುಗೆ ಮನೆಗೆ ಹೋಗಿ ಮೋಂಬತ್ತಿ ಗಾಗಿ ಹುಡುಕಾಡಿದಾಗ, ಕಡೆಗೂ ಒಂದು ಸಣ್ಣ ಮೋಂಬತ್ತಿ ಸಿಕ್ಕಿದಾಗ, ಅವಳಿಗೆ ನೀರಲ್ಲಿ ಮುಳುಗುತ್ತಿರುವವನಿಗೆ ಆಸರೆಯಾಗಿ ಹುಲ್ಲುಕಡ್ಡಿಸಿಕ್ಕಿದಂತಾಯಿತು.ಮೋಂಬತ್ತಿ ಹಚ್ಚಿ ಅಲ್ಲಿಯೇ ಇದ್ದ ಟೀಪಾಯಿ ಮೇಲೆ ಅದನ್ನು ನಿಲ್ಲಿಸಿ ,ಒದ್ದೆ ಬಟ್ಟೆ ಗಳನ್ನು ಬದಲಾಯಿಸಿ ಕೊಂಡು, ಒಂದು ಕಪ್ ಕಾಫಿ ಬೆರೆಸಿಕೊಂಡು ಉಸ್ಸಪ್ಪಾ ಎನ್ನುತ್ತಾ ಸೋಫಾದಲ್ಲಿ ಕುಳಿತಳು.

ಇದ್ದಕ್ಕಿದ್ದಂತೆ ಅವಳ ಗಮನ ಮನೆಯ ಬಾಗಿಲ ಕಡೆ ಹರಿದು, ಅನುಮಾನವಾಗಿ, ಕತ್ತಲಲ್ಲೇ ಹೆದರುತ್ತಾ ಬಾಗಿಲ ಹತ್ತಿರ ಹೋಗಿ, ಅದು ಲಾಕ್ ಆಗಿರುವುದನ್ನು ದೃಢ ಪಡಿಸಿಕೊಂಡು ಕುಳಿತಳು.ಮೋಂಬತ್ತಿ ಹಾಗೂ ಮೊಬೈಲ್ ನ ಬೆಳಕಿನ ಸಹಾಯದಿಂದ ಕಾಫಿ ಕುಡಿಯುತ್ತಿದ್ದಾಗ , ಅವಳಿಗೆ ಇಂದು ತನ್ನ ಗಂಡ ಅರುಣ್ ಕೆಲಸದ ಮೇಲೆ ಹೈದರಾಬಾದ್ ಗೆ ಹೋಗಿರುವುದು ನೆನಪಾಯಿತು."ಅಯ್ಯೋ, ಇಂದು ಅರುಣ್ ಬೇರೆ ಊರಲ್ಲಿಲ್ಲ,ಮಳೆಯ ಅಬ್ಬರ ಬೇರೆ, ಒಂದು ವೇಳೆ ಕರೆಂಟ್ ಬರದಿದ್ದರೆ?,"ಅರುಣ್ ಇರದ ಈ ರಾತ್ರಿ ಯನ್ನು ಕಲ್ಪಿಸಿಕೊಂಡು ಸಣ್ಣ ಗೆ ನಡುಗತೊಡಗಿದಳು.ಅವಳನ್ನು ಮೆಲ್ಲ ಮೆಲ್ಲನೆ ಭಯ ಆವರಿಸತೊಡಗಿತು.

ಹಾಗೇ ಕಣ್ಮುಚ್ಚಿ ಕುಳಿತಾಗ, ಅವಳಿಗೆ ಅರುಣ್ ನ ನೆನಪಾಯಿತು.ಅವನೊಂದಿಗಾದರೂ ಮಾತನಾಡುತ್ತಾ ಮನಸ್ಸನ್ನು ಹಗುರ ಮಾಡಿಕೊಳ್ಳಬೇಕೆನ್ನುತ್ತಾ, ಮೊಬೈಲ್ ಕೈಗೆತ್ತಿಕೊಂಡಾಗ,ಅದರ ಚಾರ್ಜ್ ಕಡಿಮೆಯಾಗಿದ್ದರಿಂದ ಆಫ್ ಆಗಿ ಹೋಯ್ತು. ಸಿಟ್ಟಿನಿಂದ ಅದನ್ನು ದೂರ ತಳ್ಳಿದಳು.ಕ್ಯಾಂಡಲ್ ಮೆಲ್ಲ ಮೆಲ್ಲನೆ ಕರೆಗುತ್ತಿತ್ತು.ಇನ್ನೂ ಕರೆಂಟ್ ಬಂದಿಲ್ಲ,ಮಳೆ ಸುರಿಯುತ್ತಲೇ ಇರುವುದನ್ನು ಇತ್ತು.ಒಂದು ವೇಳೆ ಕರೆಂಟ್ ಬರುವುದು ಇನ್ನೂ ತಡವಾದರೆ ಮುಂದೇನು? ಅವಳಿಗೆ ಯೋಚನೆ ಯಾಯಿತು.ಸೀದಾ   ದೇವರ ಕೋಣೆಗೆ ಹೋಗಿ ಎರಡು ಕಂಬಗಳಿಗೆ ಭರ್ತಿ ಎಣ್ಣೆ ತುಂಬಿಸಿ, ದೇವರ ದೀಪಗಳನ್ನು ಬೆಳಗಿಸಿ , ದೇವರಲ್ಲಿ "ಬೇಗ ಕರೆಂಟ್ಬರಲಪ್ಪ"ಎಂದುಮೊರೆಯಿಟ್ಟಳು.ಇಷ್ಟೆಲ್ಲಾ ಫಜೀತಿ ಗಳಲ್ಲಿ ಆರಭಿಗೆ ಹೊಟ್ಟೆ ಯ ಕಡೆ ಗಮನ ಹೋಗಿರಲಿಲ್ಲ.ಆದರೆ ಈಗ ಅವಳ ಹೊಟ್ಟೆ ಚುರುಗುಟ್ಟತೊಡಗಿದಾಗ,ಅಡುಗೆ ಮನೆಗೆ ಹೋಗಿಬಿಸ್ಕತ್ ಬ್ರೆಡ್ ಗಳನ್ನು ತಿಂದು, ನೀರು ಕುಡಿದುತನ್ನ ರೂಂ ಗೆ ಹೋಗಿ, ಮುಸುಕು ಬೀರಿ ಮಲಗಿದಳು.

ಅವಳ ಮನಸ್ಸು ದೇಹಗಳು ಅರುಣ್ ನನ್ನು ಬಯಸಿತ್ತು.ಮದುವೆಯಾಗಿ ಇನ್ನೂ ಆರು ತಿಂಗಳು ಕಳೆದಿದ್ದು,ಇದೇ ಮೊದಲ ಬಾರಿಗೆ ಅರುಣ್ ಕೆಲಸದ ಮೇಲೆ ಹೈದರಾಬಾದ್ ಗೆ ಹೋಗಿ ದ್ದ.ಸಹಜವಾಗಿ ಆರಭಿಗೆ ಗಂಡನ ನೆನಪಾಗಿ ,ಅವನ ನೆನಪುಗಳಲ್ಲಿ ಮುಳುಗಿ, ಕನಸಿನ ಲೋಕಕ್ಕೆ ಜಾರಿದಳು.

ಒಂದರ್ಧ ಗಂಟೆ ಕಳೆದಿರಬೇಕು,ನಿದ್ರೆಗೆ ಜಾರುತ್ತಿದ್ದ ಆರಭಿಗೆ ಬಾಗಿಲು "ಧಬ ಧಬ "ಬಡಿಯುವ ಶಬ್ದ ಕೇಳಿಸಿ, ಕನಸಿನ ಲೋಕದಿಂದ ವಾಸ್ತವ ಕ್ಕೆ ಬಂದು ಕಣ್ಣು ಬಿಟ್ಟಳು.ಇದು ಕನಸೋ ನನಸೋ ಎಂಬ ಅನುಮಾನದಲ್ಲಿ ಮೈಯ್ಯೆಲ್ಲಾ ಕಿವಿಯಾಗಿಸಿಕೊಂಡು

ಸುತ್ತಲೂ ಕಣ್ಣಾಡಿಸಿದಳು.ಕ್ಯಾಂಡಲ್ ದೀಪ ಆಫ್ ಆಗಿತ್ತು.ದೇವರ ಮನೆಯ ದೀಪ ಬೆಳಗುತ್ತಿತ್ತು ಹಾಳಾದ್ದು ಕರೆಂಟ್ಇನ್ನೂಬಂದಿರಲಿಲ್ಲ. ಕೆ.ಇ.ಬಿ.ಯವರಿಗೆ ಶಾಪ ಹಾಕಿ ದಳು.ಸ್ವಲ್ಪ ಸಮಯದ ನಂತರ ಮತ್ತೆ ಬಾಗಿಲು ಬಡಿಯುವ ಶಬ್ದ ಕೇಳಿದಾಗ, ಹೆದರಿಕೆಯಿಂದ ನಡುಗತೊಡಗಿದಳು.

ಯಾರೆಂದು ಕೇಳಲು ಬಾಯಿ ಬರುತ್ತಿಲ್ಲ,ನೋಡಲು ಧೈರ್ಯ ವಾಗುತ್ತಿಲ್ಲ.ಏನು‌ಮಾಡಬೇಕೆಂದು ತಿಳಿಯದೆಮತ್ತೆ ಹೊದ್ದಿಗೆ ಹೊದ್ದು ಮುಸುಕು ಬೀರಿ ಮಲಗಿದಳು. ಆದರೆ,‌ಬಾಗಿಲು ಬಡಿಯುವ ಶಬ್ದ ಕೇಳುತ್ತಲೇ ಇತ್ತು.ಎದ್ದು ಹೋಗಿ ನೋಡಲು ಭಯ, ಹಾಗೆ ಮಲಗೋಣವೆಂದರೆ ನಿದ್ರೆ ಬರುತ್ತಿಲ್ಲ.ಸ್ವಲ್ಪ ಹೊತ್ತು ಬಾಗಿಲು ಬಡಿಯುವ ಶಬ್ದ ನಿಂತಾಗ, ಅವಳಿಗೆ ಸಮಾಧಾನ ವಾಯಿತು.ಆದರೆ ಮಳೆಯ ಶಬ್ದ ನಿರಂತರವಾಗಿ ತ್ತು.ಇನ್ನೂ ಕರೆಂಟ್ ಬಂದಿಲ್ಲ.ಅವಳಿಗೆ ಚಿಂತೆ ಕಾಡಿತು.ಮತ್ತೆ ಬಾಗಿಲು ಬಡಿಯುವ ಶಬ್ದ ಕೇಳಿದಾಗ, ಕಿಟಕಿಯಲ್ಲಿ ಇಣುಕಿ ನೋಡಿದಳು.ಅವಳಿಗೆ ಯಾರೂ ಕಾಣಲಿಲ್ಲ.ದೇವರ ಕೋಣೆಗೆ ಹೋಗಿ ಮತ್ತಷ್ಟು ಎಣ್ಣೆ ತುಂಬಿಸಿ ದೀಪ ಆರದಂತೆ ಮಾಡಿದಳು.ತುಂಬಾ ಹೆದರಿ ಕೆಯಾಗಿ ಮುಸುಕೆಳೆದುಗಟ್ಟಿಯಾಗಿ ಕಣ್ಣು ಮುಚ್ಚಿ ಮಲಗಿದಳು.ಯಾರಾದರೂ ಇರಲಿ ಈ ಅವೇಳೆಯಲ್ಲಿ , ಕರೆಂಟ್ ಇಲ್ಲದೆ ಒಬ್ಬಳೇ ಇರುವಾಗ ಬಾಗಿಲು ತೆರೆಯುವುದು ಸರಿಯಿಲ್ಲ ವೆಂದು ಅವಳು ಗಟ್ಟಿಯಾಗಿ ನಿರ್ಧಾರ ಮಾಡಿ,ನಿದ್ರೆಗೆ ಜಾರಿದಳು.

ಹೊರಗಿನಿಂದ ಬಾಗಿಲು ಬಡಿದು ಬಡಿದು ಸಾಕಾಗಿ ಹೋಗಿದೆ ಅರುಣ್ ಹುಯ್ಯುವ ಮಳೆಯಲ್ಲೇ ಮನೆಯ ಮುಂದೆ ಯೇ ಬಾಗಿಲಿಗೆ ಒರಗಿ ನಿದ್ದೆ ಹೋದ.

ಅಂತೂ ಇಂತೂ ರಾತ್ರಿ ಕಳೆದು ಬೆಳಗಾಯಿತು. ನಿದ್ರೆ ಯಿಂದ ಎಚ್ಚರ ಗೊಂಡಾಗ,ಮಳೆನಿಂತಿರುವುದನ್ನು ಕಂಡು ಆರಭಿ ಸಮಾಧಾನದ ನಿಟ್ಟುಸಿರು ಬಿಟ್ಟು, ಹಾಸಿಗೆಯಿಂದ ಎದ್ದಳು.ರಂಗೋಲಿ ಹಾಕುವುದಕ್ಕೆ ಮನೆಯ ಮುಂಬಾಗಿಲನ್ನು ತೆಗೆದಾಗ,.ಹೊಸಿಲ ಬಳಿ ಕಾಲು ಚಾಚಿ ಮಲಗಿರುವ ಅರುಣ್ ನ ಕಂಡುಆಶ್ಚರ್ಯ ವಾಯಿತು.ಅಂದರೆ ರಾತ್ರಿ ಬಾಗಿಲು ಬಡಿದಿದ್ದು ಅರುಣ್ ಎಂದು ಗೊತ್ತಾದಾಗ, ಅವಳಿಗೆ ಪಶ್ಚಾತ್ತಾಪ ವಾಯಿತು.ಅವನನ್ನು ಮುಟ್ಟಿ ಎಬ್ಬಿಸಿ ಸಂಜೆ ಯಿಂದ ತಾನು ಮಳೆಯಿಂದ ತಾನು ತಲ್ಲಣಗೊಂಡಿದ್ದನ್ನು ಗಂಡನಿಗೆ ವಿವರಿಸಿ,"ಸಾರಿ" ಎಂದು ಕೇಳಿದರೆ,."ಹವಾಮಾನ ವೈಪರೀತ್ಯ ದಿಂದ ತನ್ನ ಫ್ಲೈಟ್ ಕ್ಯಾನ್ಸಲ್ ಆಗಿ,ಮಳೆಯ ಕಾರಣದಿಂದ ಮನೆಗೆ ಬರುವುದು ತಡವಾಯಿತು,ನೀನು ರಾತ್ರಿ ತೆಗೆದು ಕೊಂಡ ನಿರ್ಧಾರ ಸರಿಯಾಗಿಯೇ ಇದೆ "ಎಂದು ಹೇಳುತ್ತಾ ಹೆಂಡತಿ ಯನ್ನು ಸಮಾಧಾನ ಪಡಿಸುತ್ತಾ ಅರುಣ್ ಒಳಗೆ ಬಂದ. ಶ್ರಾವಣ ಸಂಜೆಯ ಕುಂಭದ್ರೋಣ ಮಳೆಯ ಈ ಅನುಭವ ಅವರಿಬ್ಬರ ಜೀವನದ ಮರೆಯಲಾಗದ ನೆನಪುಗಳಾದವು.

©Yakshitha

love story horror story

11 Love

White ಹುಟ್ಟಿನಿಂದಲೆ ನಾವು ರಕ್ತ ಸಂಬಂಧಗಳ ಜೊತೆ ಬೆಳೆಯುತ್ತೆವೆ. ಪ್ರೀತಿ ಕಾಳಜಿ ವಾತ್ಸಲ್ಯಗಳ ಮಧ್ಯೆ ಬೆಳೆಯುತ್ತೆವೆ. ಅದನ್ನು ಹೊರತು ಪಡಿಸಿ ನಾವು ನಮ್ಮ ಅನಿಸಿಕೆ ಅಭಿಪ್ರಾಯ ವ್ಯಕ್ತಪಡಿಸುವುದಾದರೆ ಅದು ಗೆಳತನ ಎನ್ನುವ ಕೊಂಡಿಯೊಂದಿಗೆ. ಯಾರು ಬಿಡಿಸಲಾಗದ ಕಬ್ಬಿಣದ ಕೊಂಡಿ ಅಂದ್ರು ತಪ್ಪಾಗಲಾರದು. ಗೆಳೆಯರಿಂದ ಸಿಗುವ ಒಗ್ಗಟ್ಟು ಕುಟುಂಬಗಳಲ್ಲಿ ಸಿಗಲು ಕೊಂಚ ಮಟ್ಟಿಗೆ ಕಡಿಮೆ ಇರಬಹುದು. ಅದೇನೋ ನಮಗೆ ಗೊತ್ತಿಲ್ಲದ ಹಾಗೆ ನಮ್ಮನ್ನು ಗೆಳೆತನ ಎಂಬ ಹೆಸರಲ್ಲಿ ಬೆಸೆಯುತ್ತೇವೆ. 1ರಿಂದ 10ನೆ ತರಗತಿ ಮುಗಿಸಿದ ನಂತರ ಬೆಳೆದ ಗೆಳತನ ಇದು. ರಾಜು, ಮನು, ಹರೀಶ್, ಅನಿತಾ, ಅಶ್ವಿ,ನಿ ಅಮೃತಾ ಗೆಳೆಯರ ಒಂದು ಗುಂಪು ಸಿದ್ಧವಾಗತ್ತೆ ಆ ಗುಂಪಿನಲ್ಲಿ ಎಲ್ಲದಕ್ಕೂ ಮಾನ್ಯತೆ ಇರತ್ತೆ. ಇವರು ಲಾಸ್ಟ್ ಬೆಂಚಿನ ಗೆಳೆಯರು. ಒಂದು ಹುಡುಗಿ ಇಷ್ಟಾ ಆದ್ರೆ ಸಾಕು ಎಲ್ಲರೂ ಆತನಗೆ ಸಹಾಯ ಮಾಡಲು ಮುಗಿಬಿಳ್ಳುವುದು ಸಾಮಾನ್ಯವಾಗಿತ್ತು.ಇನ್ನೂಬ್ಬ ಗೆಳೆಯನ ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಕೆಟ್ಟಾಗ ಅವನಿಗೆ ಸಹಾಯದ ಜೊತೆಗೆ ಸುಂದರ ಜೀವನ ರೂಪಿಸಲು ಏಷ್ಟಾಗತ್ತೊ ಅಷ್ಟು ಸಹಾಯ ಮಾಡುವುದು. ಒಬ್ಬರನ್ನು ಇನ್ನೊಬ್ಬರು ಅನುಕರಿಸುವುದು ಪ್ರಚೋದಿಸುವುದು, ತಮಾಷೆ ಮಾಡುವುದು ಎಲ್ಲವೂ ಇತ್ತು. ಇಂತಹ ಗೆಳತನ ಒಂದು ವಿಷಯಕ್ಕೆ ಜಗಳವಾಡಿ ಅವರ ಗೆಳತನ ಮುರಿದು ಬಿಳ್ಳುತ್ತೇ. ಆ ಜಗಳದ ಹಿಂದೆ ಒಂದು ಪ್ರೀತಿಯ ಬೆಂಕಿ ಉರಿಯುವುದಕ್ಕೆ ಪ್ರಾರಂಭವಾಗಿರತ್ತೆ. ರಾಜು ಮತ್ತು ಮನುಗೆ ಅಮೃತಾ ನನಗೆ ಸೇರಿದವಳು, ನನಗೆ ಸೇರಿದವಳು ಎಂದು ಭಿನ್ನಾಭಿಪ್ರಾಯ ಇರುವುದನ್ನು ಅಶ್ವಿನಿ ನೋಡಿದ್ದಳು. ಅದನ್ನು ಮೊದಲೇ ಅಮೃತಳ ಜೊತೆ ಮಾತಾಡಿದ್ದಳು. ರಾಜು ಮತ್ತೆ ಮನು ಇಬ್ಬರು ಅಮೃತಳನ್ನ ಇಷ್ಟಾ ಪಟ್ಟಿರುತ್ತಾರೆ ಅದನ್ನೇ ಮಾತನಾಡುವುದಕ್ಕೆ ಅವಳ ಹತ್ತಿರ ಬಂದು ನಿಂತಾಗ ಅಮೃತ ಹೇಳಿದ ಮಾತುಗಳು ಹೀಗಿದ್ದವು. ಇಬ್ಬರು ಒಳ್ಳೆಯ ಸ್ನೇಹಿತರು ನೀವು. ಪ್ರೀತಿ ಅಂತ ಬಂದಾಗ ಅದನ್ನಾ ಒಬ್ಬರಿಗೆ ಮೀಸಲು ಇಡಲು ಸಾಧ್ಯ ಎಂದು ಅಮೃತ ಅವರಿಬ್ಬರಿಗೂ ತಿಳಿಸಿ ಹೇಳಿದಳು. ನಮ್ಮ ಈ ಸ್ನೇಹದ ಬಗ್ಗೆ ಗೌರವ ಇದೆ, ಈ ಪ್ರೀತಿ ಪ್ರೇಮದ ಹಿಂದೆ ಬೀಳುವುದು ಬೇಡಾ. ಓದೋಣ, ನಮ್ಮ ಸ್ವಂತ ದುಡಿಮೆಗೆ ಏನು ಬೇಕು ಎಂಬುದರ ಬಗ್ಗೆ ಅರಿಯೋಣ. ಈ ವಿಷಯವನ್ನು ಅಲ್ಲಿಗೆ ಬಿಟ್ಟು ಬಿಡೋಣ. ಮನು, ರಾಜು ನಾನು ಹೇಳುವುದು ನಿಮಗೆ ಅರ್ಥ ಆಗಿದೆ ಅಂತ ಅಂದುಕೊಳ್ಳುವೆ ಎಂದು ಹೇಳಿದಳು. ರಾಜು ಮತ್ತೆ ಮನುಗೆ ಅವಳ ಮಾತು ನಿಜ ಅಂತ ಅನಿಸಿತು. ನೋಡಿ ನೀವು ನನ್ನ ಬೆಸ್ಟ್ ಪ್ರೇಡ್ಸ್ ನೀವು ಹೀಗೆ ಮಾಡುವುದು ಸರಿ ಅಲ್ಲಾ ಎಂದು ಅಮೃತ ಮತ್ತೆ ಭಾರವಾದ ಮನಸ್ಸಿನಿಂದ ಹೇಳಿದಳು. ರಾಜು ಮನು sorry ಕೇಳಿ ಮತ್ತೆ ಗೆಳತನವನ್ನು ಮುಂದುವರಿಸಿದರು. ರಾಜು,ಮನು, ಮತ್ತೆ ಅಮೃತಾ ಹೊಸದೊಂದು ಹೆಜ್ಜೆಗೆ ಮುಂದಾಗುತ್ತಾರೆ. ಅವರಲ್ಲಿ ಇದ್ದ ಭಿನ್ನಾಭಿಪ್ರಾಯವನ್ನು ತೆಗೆದೊಗೆದು ಒಳ್ಳೆಯ ಸ್ನೇಹಿತರಾಗಿ ಮುಂದೆ ಸಾಗುತ್ತಾರೆ. ನಿಜ ಅಲ್ವಾ ಸ್ನೇಹಿತರೇ ಸ್ನೇಹವೆ ಬೇರೆ, ಪ್ರೀತಿಯೇ ಬೇರೆ. ©Yakshitha

#ಪ್ರೀತಿ #Sad_Status  White ಹುಟ್ಟಿನಿಂದಲೆ ನಾವು ರಕ್ತ ಸಂಬಂಧಗಳ ಜೊತೆ ಬೆಳೆಯುತ್ತೆವೆ. ಪ್ರೀತಿ ಕಾಳಜಿ ವಾತ್ಸಲ್ಯಗಳ ಮಧ್ಯೆ ಬೆಳೆಯುತ್ತೆವೆ. ಅದನ್ನು ಹೊರತು ಪಡಿಸಿ ನಾವು ನಮ್ಮ ಅನಿಸಿಕೆ ಅಭಿಪ್ರಾಯ ವ್ಯಕ್ತಪಡಿಸುವುದಾದರೆ ಅದು ಗೆಳತನ ಎನ್ನುವ ಕೊಂಡಿಯೊಂದಿಗೆ. ಯಾರು ಬಿಡಿಸಲಾಗದ ಕಬ್ಬಿಣದ ಕೊಂಡಿ ಅಂದ್ರು ತಪ್ಪಾಗಲಾರದು. ಗೆಳೆಯರಿಂದ ಸಿಗುವ ಒಗ್ಗಟ್ಟು ಕುಟುಂಬಗಳಲ್ಲಿ ಸಿಗಲು ಕೊಂಚ ಮಟ್ಟಿಗೆ ಕಡಿಮೆ ಇರಬಹುದು. ಅದೇನೋ ನಮಗೆ ಗೊತ್ತಿಲ್ಲದ ಹಾಗೆ ನಮ್ಮನ್ನು ಗೆಳೆತನ ಎಂಬ ಹೆಸರಲ್ಲಿ ಬೆಸೆಯುತ್ತೇವೆ. 



1ರಿಂದ 10ನೆ ತರಗತಿ ಮುಗಿಸಿದ ನಂತರ ಬೆಳೆದ ಗೆಳತನ ಇದು. ರಾಜು, ಮನು, ಹರೀಶ್, ಅನಿತಾ, ಅಶ್ವಿ,ನಿ ಅಮೃತಾ ಗೆಳೆಯರ ಒಂದು ಗುಂಪು ಸಿದ್ಧವಾಗತ್ತೆ ಆ ಗುಂಪಿನಲ್ಲಿ ಎಲ್ಲದಕ್ಕೂ ಮಾನ್ಯತೆ ಇರತ್ತೆ. ಇವರು ಲಾಸ್ಟ್ ಬೆಂಚಿನ ಗೆಳೆಯರು. ಒಂದು ಹುಡುಗಿ ಇಷ್ಟಾ ಆದ್ರೆ ಸಾಕು ಎಲ್ಲರೂ ಆತನಗೆ ಸಹಾಯ ಮಾಡಲು ಮುಗಿಬಿಳ್ಳುವುದು ಸಾಮಾನ್ಯವಾಗಿತ್ತು.ಇನ್ನೂಬ್ಬ ಗೆಳೆಯನ ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಕೆಟ್ಟಾಗ ಅವನಿಗೆ ಸಹಾಯದ ಜೊತೆಗೆ ಸುಂದರ ಜೀವನ ರೂಪಿಸಲು ಏಷ್ಟಾಗತ್ತೊ ಅಷ್ಟು ಸಹಾಯ ಮಾಡುವುದು. ಒಬ್ಬರನ್ನು ಇನ್ನೊಬ್ಬರು ಅನುಕರಿಸುವುದು ಪ್ರಚೋದಿಸುವುದು, ತಮಾಷೆ ಮಾಡುವುದು ಎಲ್ಲವೂ ಇತ್ತು. ಇಂತಹ ಗೆಳತನ ಒಂದು ವಿಷಯಕ್ಕೆ ಜಗಳವಾಡಿ ಅವರ ಗೆಳತನ ಮುರಿದು ಬಿಳ್ಳುತ್ತೇ.



ಆ ಜಗಳದ ಹಿಂದೆ ಒಂದು ಪ್ರೀತಿಯ ಬೆಂಕಿ ಉರಿಯುವುದಕ್ಕೆ ಪ್ರಾರಂಭವಾಗಿರತ್ತೆ. ರಾಜು ಮತ್ತು ಮನುಗೆ ಅಮೃತಾ ನನಗೆ ಸೇರಿದವಳು, ನನಗೆ ಸೇರಿದವಳು ಎಂದು ಭಿನ್ನಾಭಿಪ್ರಾಯ ಇರುವುದನ್ನು ಅಶ್ವಿನಿ ನೋಡಿದ್ದಳು. ಅದನ್ನು ಮೊದಲೇ ಅಮೃತಳ ಜೊತೆ ಮಾತಾಡಿದ್ದಳು. ರಾಜು ಮತ್ತೆ ಮನು ಇಬ್ಬರು ಅಮೃತಳನ್ನ ಇಷ್ಟಾ ಪಟ್ಟಿರುತ್ತಾರೆ ಅದನ್ನೇ ಮಾತನಾಡುವುದಕ್ಕೆ ಅವಳ ಹತ್ತಿರ ಬಂದು ನಿಂತಾಗ ಅಮೃತ ಹೇಳಿದ ಮಾತುಗಳು ಹೀಗಿದ್ದವು. ಇಬ್ಬರು ಒಳ್ಳೆಯ ಸ್ನೇಹಿತರು ನೀವು. ಪ್ರೀತಿ ಅಂತ ಬಂದಾಗ ಅದನ್ನಾ ಒಬ್ಬರಿಗೆ ಮೀಸಲು ಇಡಲು ಸಾಧ್ಯ ಎಂದು ಅಮೃತ ಅವರಿಬ್ಬರಿಗೂ ತಿಳಿಸಿ ಹೇಳಿದಳು. ನಮ್ಮ ಈ ಸ್ನೇಹದ ಬಗ್ಗೆ ಗೌರವ ಇದೆ, ಈ ಪ್ರೀತಿ ಪ್ರೇಮದ ಹಿಂದೆ ಬೀಳುವುದು ಬೇಡಾ. ಓದೋಣ, ನಮ್ಮ ಸ್ವಂತ ದುಡಿಮೆಗೆ ಏನು ಬೇಕು ಎಂಬುದರ ಬಗ್ಗೆ ಅರಿಯೋಣ. ಈ ವಿಷಯವನ್ನು ಅಲ್ಲಿಗೆ ಬಿಟ್ಟು ಬಿಡೋಣ. ಮನು, ರಾಜು ನಾನು ಹೇಳುವುದು ನಿಮಗೆ ಅರ್ಥ ಆಗಿದೆ ಅಂತ ಅಂದುಕೊಳ್ಳುವೆ ಎಂದು ಹೇಳಿದಳು.



ರಾಜು ಮತ್ತೆ ಮನುಗೆ ಅವಳ ಮಾತು ನಿಜ ಅಂತ ಅನಿಸಿತು. ನೋಡಿ ನೀವು ನನ್ನ ಬೆಸ್ಟ್ ಪ್ರೇಡ್ಸ್ ನೀವು ಹೀಗೆ ಮಾಡುವುದು ಸರಿ ಅಲ್ಲಾ ಎಂದು ಅಮೃತ ಮತ್ತೆ ಭಾರವಾದ ಮನಸ್ಸಿನಿಂದ ಹೇಳಿದಳು. ರಾಜು ಮನು sorry ಕೇಳಿ ಮತ್ತೆ ಗೆಳತನವನ್ನು ಮುಂದುವರಿಸಿದರು. ರಾಜು,ಮನು, ಮತ್ತೆ ಅಮೃತಾ ಹೊಸದೊಂದು ಹೆಜ್ಜೆಗೆ ಮುಂದಾಗುತ್ತಾರೆ. ಅವರಲ್ಲಿ ಇದ್ದ ಭಿನ್ನಾಭಿಪ್ರಾಯವನ್ನು ತೆಗೆದೊಗೆದು ಒಳ್ಳೆಯ ಸ್ನೇಹಿತರಾಗಿ ಮುಂದೆ ಸಾಗುತ್ತಾರೆ. ನಿಜ ಅಲ್ವಾ ಸ್ನೇಹಿತರೇ ಸ್ನೇಹವೆ ಬೇರೆ, ಪ್ರೀತಿಯೇ ಬೇರೆ.

©Yakshitha

#Sad_Status love status

9 Love

White ಜಗತ್ತಿನಲ್ಲಿ ಎಲ್ಲ ಭಾಗದಲ್ಲೂ ದೇವರು ಬರಲಾಗುವುದಿಲ್ಲ ಅನ್ನುವ ವಿಚಾರಕ್ಕೆ ದೇವರು ತಾಯಿಯನ್ನು ಸೃಷ್ಟಿಸಿದ ಎನ್ನುವ ಮಾತು ನಾವು ನೀವೆಲ್ಲರೂ ಕೇಳಿದ್ದುಂಟು! ತಾಯಿಯು ತನ್ನ ಮಕ್ಕಳಿಗಾಗಿ‌ ಮಾಡಿದ ತ್ಯಾಗಕ್ಕೆ ಎಷ್ಟೇ ಜನ್ಮ ಅವಳ ಸೇವೆ ಮಾಡಿದರು ಅವಳ ಋಣ ತೀರಿಸಲು ಸಾಧ್ಯವಿಲ್ಲ!ಅಂತಹ ತಾಯಿಯ ಋಣ ತೀರಸಲು ಮುಂದಾದ ದಡ್ಡ ಮಗ ಹಾಗೂ ತಾಯಿಯ ನಡುವಿನ ಸಂಭಾಷಣೆ ನಿಮಗಾಗಿ..... ಮಗ:ಅಮ್ಮ ನನಗಾಗಿ ನೀನು ಅದನ್ನ ಮಾಡಿದ್ದೀನಿ,ಇದನ್ನ ಮಾಡಿದ್ದೀನಿ‌ ಅನ್ನುವ ಮಾತುಗಳು ನನಗೆ ಸಹಿಸಲಾಗುತ್ತಿಲ್ಲ.ಎಷ್ಟು ದಿನಗಳವರೆಗೂ ಇದನ್ನೇ ಹೇಳ್ತೀಯಾ?ನನಗಾಗಿ ನೀನು‌ ಏನು ಮಾಡಿದ್ದೀಯ ಹೇಳಿ ಬಿಡು,ಇವತ್ತೇ ನಿನ್ನೆಲ್ಲ ಋಣ ತೀರಿಸಿಬಿಡುವೇ ನಿನ್ನ ಜೊತೆ ಇರುವ ಎಲ್ಲಾ ಕ್ಷಣಗಳು ಇದನ್ನೇ ಕೇಳುವುದಾಯ್ತು! ತಾಯಿ:ನನ್ನ ಋಣ ತೀರಿಸುವೆಯಾ? ಮಗ:ಹೌದು ಅದಕ್ಕಾಗಿ ನಾನು ಏನು ಮಾಡಬೇಕು ಹೇಳು. ತಾಯಿ:ಇವತ್ತು ಒಂದು ದಿನ ನನ್ನ ಕೋಣೆಯಲ್ಲಿ ನನ್ನ ಪಕ್ಕ ಮಲಗು ನನ್ನೆಲ್ಲಾ ಋಣ ನೀನು ತೀರಿಸಿದಂತಾಗುತ್ತದೆ. ಮಗ:ಇಷ್ಟು ಸುಲಭವೇ ನಿನ್ನ ಋಣ ತೀರಿಸುವುದು? ಆಯ್ತು ಇವತ್ತಿನ ದಿನ ನಾನು ನಿನ್ನ ಕೋಣೆಯಲ್ಲಿ ಮಲಗುವೆ. (ರಾತ್ರಿ ಆಗುತ್ತಿದ್ದಂತೆ ಮಗನನ್ನ ಕರೆದಳು ತಾಯಿ,ತಾಯಿ ಮಗ ಇಬ್ಬರು ಮಲಗಿದರು,ಮಗನಿಗೆ ನಿದ್ದೆ ಬರುತ್ತಿರುವ ಸಂದರ್ಭದಲ್ಲಿ ತಾಯಿ ಅವನನ್ನು ಎಚ್ಚರಿಸಿದಳು) ತಾಯಿ:ಮಗ ನನಗೆ ತುಂಬಾ ಬಾಯಾರಿಕೆ ಆಗುತ್ತಿದೆ,ಸ್ವಲ್ಪ ನೀರು ತಂದು ಕೊಡು. (ಮಗನಿಗೆ ನಿದ್ದೆಯಿಂದ ಎ‍ಚ್ಚರಿಸಿದ ಕೋಪ ಇದ್ದರು,ಸಮಾಧಾನದಿಂದ ಉತ್ತರಿಸಿದ.) ಮಗ:ಆಯ್ತು ಅಮ್ಮ!ತಂದುಕೊಡುವೆ... (ಮಗ ನೀರು ತಂದು ಕೊಡುತ್ತಿದ್ದಂತೆಯೇ ಸ್ವಲ್ಪ ನೀರು ಕುಡಿದು ಮಗನ ಹಾಸಿಗೆಯ ತುಂಬಾ ನೀರು ಹಾಕುತ್ತಾಳೆ) ಮಗ:ಅಮ್ಮ ಇದೇನು ನಿನ್ನ‌ ಕೆಲಸ?ನೀನು‌ ನೀರು ಚೆಲ್ಲಿದರೇ ನಾನು ಹೇಗೆ ನಿದ್ರಿಸಲಿ ಈ ಹಾಸಿಗೆಯಲ್ಲಿ ???(ಕೋಪದಿಂದ) ತಾಯಿ:ತಪ್ಪಾಯ್ತು ಮಗ,ವಯಸ್ಸಾಯ್ತು ಕೈಯಲ್ಲಿ ನೀರಿನ ಲೋಟ ಹಿಡಿಯುವ ಶಕ್ತಿಯು ನನ್ನಲ್ಲಿ ಇಲ್ಲ,ಹಾಗಾಗಿ ಕೈ ಜಾರಿತು,ಪರವಾಗಿಲ್ಲ ಏನು ಆಗಲ್ಲ ಅದರಲ್ಲೇ ಮಲಗು. ಮಗ:ಏನು ಕರ್ಮ ನನ್ನದು!ಇದೇ ಗೋಳಿನ ಬದುಕು ನನ್ನದಾಯಿತು,ಯಾವಾಗ ಈ ಮುದುಕಿಯಿಂದ ನೆಮ್ಮದಿ ದೊರೆಯುವುದೋ ನನಗೆ!(ಅಮ್ಮ ಮೇಲಿನ ಕೋಪದಲ್ಲಿ ಗುಣುಗುತ್ತಾ) (ಹೀಗೆ ಸ್ವಲ್ಪ ಹೊತ್ತಾದ ಮೇಲೆ ಮಗನಿಗೆ ನಿದ್ದೆ ಬರಲಾರಂಭಿಸಿತು. ಮತ್ತೆ ಮಗನನ್ನು ಎಚ್ಚರಿಸಿ ನೀರು ತಂದುಕೊಡಲು ಹೇಳಿದಳು,ಮಗ ಕೋಪದಿಂದ ಎದ್ದು ಮತ್ತದೆ ಗೊಣಗಾಟದಲ್ಲಿ ನೀರು ತಂದುಕೊಡುವನು.ತಾಯಿ ಮೊದಲಿನ ಹಾಗೆ ಸ್ವಲ್ಪ ನೀರು ಕುಡಿದು ಮಗನ ಹಾಸಿಗೆ ಮೇಲೆ ನೀರು ಹಾಕಿದಳು.) ಮಗ:ಅಮ್ಮ ನಿನಗೆ ಬುದ್ದಿ ಇಲ್ಲವೇ,ನನ್ನ ಹಾಸಿಗೆ ನೀನು ಒದ್ದೆ ಮಾಡುತ್ತಲೇ ಹೋದರೆ ನಾನು ಹೇಗೆ ನಿದ್ರಿಸಲಿ,ಈ ನರಕ ನನಗೆ ಬೇಡ ನಾನು ನನ್ನ ಕೋಣೆಯಲ್ಲಿಯೇ ಮಲಗುವೆ,ನೀನು ಬೇಡ ನಿನ್ನ ಋಣವು ಬೇಡ!(ತಾಯಿ ಮಗನನ್ನ ಕರೆದು ಜೋರಾಗಿ ಹೊಡೆಯುವಳು.)ಯಾಕೆ ಹೊಡೆದೆ???(ಕೋಪದಲ್ಲಿ) ತಾಯಿ:ಇವತ್ತು ನಿನ್ನ ಹಾಸಿಗೆ ನೀರಾಯಿತೆಂದು ನನ್ನ ಮೇಲೆ ಅಷ್ಟು ಕೋಪದಲ್ಲಿ ನೀನು ನನಗೆ ಮಾತನಾಡಿದೆ,ನೀನು ಚಿಕ್ಕವನಿದ್ದಾಗ ನನ್ನ ಪಕ್ಕದಲ್ಲಿ ನಿನ್ನ ಮಲಗಿಸಿಕೊಂಡಾಗ,ನೀನು ಮೂತ್ರ ಮಾಡಿದರೆ ಆ ಜಾಗದಲ್ಲಿ ನಾನು ಮಲಗಿ ನಿನ್ನ ಬೆಚ್ಚಗಿರಿಸುತ್ತಿದ್ದೆ.ಎಡಕ್ಕೆ ಮೂತ್ರ ಮಾಡಿದರೆ ನಿನ್ನ ನನ್ನ ಬಲಗಡೆ ಮಲಗಿಸಿ ನಿನ್ನ ಮೂತ್ರದಲ್ಲಿ ನಾನು ಮಲಗುತ್ತಿದ್ದೆ,ಒಂದುವೇಳೆ ನೀನು ಅಲ್ಲಿಯೂ ಮೂತ್ರ ಮಾಡಿದರೆ,ನನ್ನ ಎದೆಯ ಮೇಲೆ ಮಲಗಿಸಿಕೊಳ್ಳುತ್ತಿದ್ದೆ.ನಿನ್ನ ಹಾಸಿಗೆ ಬರಿ ನೀರಿನಿಂದ ಒದ್ದೆಯಾಗಿದೆ, ಆದರೆ ನಿನ್ನ ಹೊಲಸಿನಿಂದ ನನ್ನ ಹಾಸಿಗೆ ಒದ್ದೆ ಮಾಡಿದ್ದರೂ ನಾನು ನಿನ್ನ ಭಾರವೆಂದು ದೂರಲಿಲ್ಲ,ಆದರೆ ನೀನು ನನಗೆ ವಯಸ್ಸಾದ ಕಾರಣ ನನ್ನ ಬಗೆಗೆ ಅಗೌರವದ ನುಡಿಗಳಾನ್ನಾಡುವೆಯಾ??ಈ ಜಗತ್ತಿನಲ್ಲಿ ತಾಯಿಯ ಋಣ ಯಾವ ಮಗನಿಗೂ ತೀರಿಸಲು ಸಾಧ್ಯವಿಲ್ಲ ಅನ್ನುವುದನ್ನು ಅರಿತುಕೊಂಡು ಬದುಕು ಮಗ.! (ಮಗನಿಗೆ ತಾನು ಮಾತನಾಡಿದ ನುಡಿಗಳು ತನಗೆ ನಾಚಿಕೆ ತರಿಸಿದವು,ತಾಯಿಯ ಕಾಲಿಗೆ ಬಿದ್ದು ಕ್ಷಮೆಯಾಚಿಸಿ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊತ್ತುಕೊಂಡ!) ನಮಗಾಗಿ ತನ್ನೆಲ್ಲಾ ಆಸೆಗಳನ್ನ ಬದಿಗೊತ್ತಿ ಕೇವಲ ಮಕ್ಕಳಿಗಾಗಿ ಬದುಕುವ ಜೀವ ತಾಯಿ!ಅಂತಹ ಜಗತ್ತಿನ ಎಲ್ಲಾ ತಾಯಂದಿರಿಗೆ ನನ್ನ ನಮನಗಳು,ಹಾಗೆ ತಾಯಿಯನ್ನು ನಾಯಿಯಂತೆ ನೋಡದಿರಿ,ತಾಯಿಯಿಲ್ಲದೆ ಜಗವೆಲ್ಲ ನಮ್ಮ ಜೊತೆಗಿದ್ದರೂ,ತಾಯಿಯೆಂಬ ಶ್ರೇಷ್ಠ ಚೈತನ್ಯ ಇಲ್ಲದ ಕೊರಗು ನರಕಕ್ಕಿಂತ ಕೀಳಾಗಿ ಇರುತ್ತದೆ!ತಾಯಿಯನ್ನು ‌ಗೌರವಿಸಿ..... *ಭಾವನೆಗಳ ಬದುಕು ಸೋನು (ವಿ.ಸೂ: ಒಬ್ಬ ವ್ಯಕ್ತಿಯ ಹಿಂದಿ ಭಾಷಣದ ಕನ್ನಡ ಅನುವಾದ ©Yakshitha

#ಪ್ರೀತಿ #Sad_Status  White ಜಗತ್ತಿನಲ್ಲಿ ಎಲ್ಲ ಭಾಗದಲ್ಲೂ ದೇವರು ಬರಲಾಗುವುದಿಲ್ಲ ಅನ್ನುವ ವಿಚಾರಕ್ಕೆ ದೇವರು ತಾಯಿಯನ್ನು ಸೃಷ್ಟಿಸಿದ ಎನ್ನುವ ಮಾತು ನಾವು ನೀವೆಲ್ಲರೂ ಕೇಳಿದ್ದುಂಟು! ತಾಯಿಯು ತನ್ನ ಮಕ್ಕಳಿಗಾಗಿ‌ ಮಾಡಿದ ತ್ಯಾಗಕ್ಕೆ ಎಷ್ಟೇ ಜನ್ಮ ಅವಳ ಸೇವೆ ಮಾಡಿದರು ಅವಳ ಋಣ ತೀರಿಸಲು ಸಾಧ್ಯವಿಲ್ಲ!ಅಂತಹ ತಾಯಿಯ ಋಣ ತೀರಸಲು ಮುಂದಾದ ದಡ್ಡ ಮಗ ಹಾಗೂ ತಾಯಿಯ ನಡುವಿನ ಸಂಭಾಷಣೆ ನಿಮಗಾಗಿ.....



ಮಗ:ಅಮ್ಮ ನನಗಾಗಿ ನೀನು ಅದನ್ನ ಮಾಡಿದ್ದೀನಿ,ಇದನ್ನ ಮಾಡಿದ್ದೀನಿ‌ ಅನ್ನುವ ಮಾತುಗಳು ನನಗೆ ಸಹಿಸಲಾಗುತ್ತಿಲ್ಲ.ಎಷ್ಟು ದಿನಗಳವರೆಗೂ ಇದನ್ನೇ ಹೇಳ್ತೀಯಾ?ನನಗಾಗಿ ನೀನು‌ ಏನು ಮಾಡಿದ್ದೀಯ ಹೇಳಿ ಬಿಡು,ಇವತ್ತೇ ನಿನ್ನೆಲ್ಲ ಋಣ ತೀರಿಸಿಬಿಡುವೇ ನಿನ್ನ ಜೊತೆ ಇರುವ ಎಲ್ಲಾ ಕ್ಷಣಗಳು ಇದನ್ನೇ ಕೇಳುವುದಾಯ್ತು!

ತಾಯಿ:ನನ್ನ ಋಣ ತೀರಿಸುವೆಯಾ?

ಮಗ:ಹೌದು ಅದಕ್ಕಾಗಿ ನಾನು ಏನು ಮಾಡಬೇಕು ಹೇಳು.

ತಾಯಿ:ಇವತ್ತು ಒಂದು ದಿನ ನನ್ನ ಕೋಣೆಯಲ್ಲಿ ನನ್ನ ಪಕ್ಕ ಮಲಗು ನನ್ನೆಲ್ಲಾ ಋಣ ನೀನು ತೀರಿಸಿದಂತಾಗುತ್ತದೆ.

ಮಗ:ಇಷ್ಟು ಸುಲಭವೇ ನಿನ್ನ ಋಣ ತೀರಿಸುವುದು?

ಆಯ್ತು ಇವತ್ತಿನ ದಿನ ನಾನು ನಿನ್ನ ಕೋಣೆಯಲ್ಲಿ ಮಲಗುವೆ.

(ರಾತ್ರಿ ಆಗುತ್ತಿದ್ದಂತೆ ಮಗನನ್ನ ಕರೆದಳು ತಾಯಿ,ತಾಯಿ ಮಗ ಇಬ್ಬರು ಮಲಗಿದರು,ಮಗನಿಗೆ ನಿದ್ದೆ ಬರುತ್ತಿರುವ ಸಂದರ್ಭದಲ್ಲಿ ತಾಯಿ ಅವನನ್ನು ಎಚ್ಚರಿಸಿದಳು)

ತಾಯಿ:ಮಗ ನನಗೆ ತುಂಬಾ ಬಾಯಾರಿಕೆ ಆಗುತ್ತಿದೆ,ಸ್ವಲ್ಪ ನೀರು ತಂದು ಕೊಡು.

(ಮಗನಿಗೆ ನಿದ್ದೆಯಿಂದ ಎ‍ಚ್ಚರಿಸಿದ ಕೋಪ ಇದ್ದರು,ಸಮಾಧಾನದಿಂದ ಉತ್ತರಿಸಿದ.)

ಮಗ:ಆಯ್ತು ಅಮ್ಮ!ತಂದುಕೊಡುವೆ...

(ಮಗ ನೀರು ತಂದು ಕೊಡುತ್ತಿದ್ದಂತೆಯೇ ಸ್ವಲ್ಪ ನೀರು ಕುಡಿದು ಮಗನ ಹಾಸಿಗೆಯ ತುಂಬಾ ನೀರು ಹಾಕುತ್ತಾಳೆ)

ಮಗ:ಅಮ್ಮ ಇದೇನು ನಿನ್ನ‌ ಕೆಲಸ?ನೀನು‌ ನೀರು ಚೆಲ್ಲಿದರೇ ನಾನು ಹೇಗೆ ನಿದ್ರಿಸಲಿ ಈ ಹಾಸಿಗೆಯಲ್ಲಿ ???(ಕೋಪದಿಂದ)

ತಾಯಿ:ತಪ್ಪಾಯ್ತು ಮಗ,ವಯಸ್ಸಾಯ್ತು ಕೈಯಲ್ಲಿ ನೀರಿನ ಲೋಟ ಹಿಡಿಯುವ ಶಕ್ತಿಯು ನನ್ನಲ್ಲಿ ಇಲ್ಲ,ಹಾಗಾಗಿ ಕೈ ಜಾರಿತು,ಪರವಾಗಿಲ್ಲ ಏನು ಆಗಲ್ಲ ಅದರಲ್ಲೇ ಮಲಗು.

ಮಗ:ಏನು ಕರ್ಮ ನನ್ನದು!ಇದೇ ಗೋಳಿನ ಬದುಕು ನನ್ನದಾಯಿತು,ಯಾವಾಗ ಈ ಮುದುಕಿಯಿಂದ ನೆಮ್ಮದಿ ದೊರೆಯುವುದೋ ನನಗೆ!(ಅಮ್ಮ ಮೇಲಿನ ಕೋಪದಲ್ಲಿ ಗುಣುಗುತ್ತಾ)


(ಹೀಗೆ ಸ್ವಲ್ಪ ಹೊತ್ತಾದ ಮೇಲೆ ಮಗನಿಗೆ ನಿದ್ದೆ ಬರಲಾರಂಭಿಸಿತು. ಮತ್ತೆ ಮಗನನ್ನು ಎಚ್ಚರಿಸಿ ನೀರು ತಂದುಕೊಡಲು ಹೇಳಿದಳು,ಮಗ ಕೋಪದಿಂದ ಎದ್ದು ಮತ್ತದೆ ಗೊಣಗಾಟದಲ್ಲಿ ನೀರು ತಂದುಕೊಡುವನು.ತಾಯಿ ಮೊದಲಿನ ಹಾಗೆ ಸ್ವಲ್ಪ ನೀರು ಕುಡಿದು ಮಗನ ಹಾಸಿಗೆ ಮೇಲೆ ನೀರು ಹಾಕಿದಳು.)

ಮಗ:ಅಮ್ಮ ನಿನಗೆ ಬುದ್ದಿ ಇಲ್ಲವೇ,ನನ್ನ ಹಾಸಿಗೆ ನೀನು ಒದ್ದೆ ಮಾಡುತ್ತಲೇ ಹೋದರೆ ನಾನು ಹೇಗೆ ನಿದ್ರಿಸಲಿ,ಈ ನರಕ ನನಗೆ ಬೇಡ ನಾನು ನನ್ನ ಕೋಣೆಯಲ್ಲಿಯೇ ಮಲಗುವೆ,ನೀನು ಬೇಡ ನಿನ್ನ ಋಣವು ಬೇಡ!(ತಾಯಿ ಮಗನನ್ನ ಕರೆದು ಜೋರಾಗಿ ಹೊಡೆಯುವಳು.)ಯಾಕೆ ಹೊಡೆದೆ???(ಕೋಪದಲ್ಲಿ)

ತಾಯಿ:ಇವತ್ತು ನಿನ್ನ ಹಾಸಿಗೆ ನೀರಾಯಿತೆಂದು ನನ್ನ ಮೇಲೆ ಅಷ್ಟು ಕೋಪದಲ್ಲಿ ನೀನು ನನಗೆ ಮಾತನಾಡಿದೆ,ನೀನು ಚಿಕ್ಕವನಿದ್ದಾಗ ನನ್ನ ಪಕ್ಕದಲ್ಲಿ ನಿನ್ನ ಮಲಗಿಸಿಕೊಂಡಾಗ,ನೀನು ಮೂತ್ರ ಮಾಡಿದರೆ ಆ ಜಾಗದಲ್ಲಿ ನಾನು ಮಲಗಿ ನಿನ್ನ ಬೆಚ್ಚಗಿರಿಸುತ್ತಿದ್ದೆ.ಎಡಕ್ಕೆ ಮೂತ್ರ ಮಾಡಿದರೆ ನಿನ್ನ ನನ್ನ ಬಲಗಡೆ ಮಲಗಿಸಿ ನಿನ್ನ ಮೂತ್ರದಲ್ಲಿ ನಾನು ಮಲಗುತ್ತಿದ್ದೆ,ಒಂದುವೇಳೆ ನೀನು ಅಲ್ಲಿಯೂ ಮೂತ್ರ ಮಾಡಿದರೆ,ನನ್ನ ಎದೆಯ ಮೇಲೆ ಮಲಗಿಸಿಕೊಳ್ಳುತ್ತಿದ್ದೆ.ನಿನ್ನ ಹಾಸಿಗೆ ಬರಿ ನೀರಿನಿಂದ ಒದ್ದೆಯಾಗಿದೆ, ಆದರೆ ನಿನ್ನ ಹೊಲಸಿನಿಂದ ನನ್ನ ಹಾಸಿಗೆ ಒದ್ದೆ ಮಾಡಿದ್ದರೂ ನಾನು ನಿನ್ನ ಭಾರವೆಂದು ದೂರಲಿಲ್ಲ,ಆದರೆ ನೀನು ನನಗೆ ವಯಸ್ಸಾದ ಕಾರಣ ನನ್ನ ಬಗೆಗೆ ಅಗೌರವದ ನುಡಿಗಳಾನ್ನಾಡುವೆಯಾ??ಈ ಜಗತ್ತಿನಲ್ಲಿ ತಾಯಿಯ ಋಣ ಯಾವ ಮಗನಿಗೂ ತೀರಿಸಲು ಸಾಧ್ಯವಿಲ್ಲ ಅನ್ನುವುದನ್ನು ಅರಿತುಕೊಂಡು ಬದುಕು ಮಗ.!



(ಮಗನಿಗೆ ತಾನು ಮಾತನಾಡಿದ ನುಡಿಗಳು ತನಗೆ ನಾಚಿಕೆ ತರಿಸಿದವು,ತಾಯಿಯ ಕಾಲಿಗೆ ಬಿದ್ದು ಕ್ಷಮೆಯಾಚಿಸಿ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊತ್ತುಕೊಂಡ!)

ನಮಗಾಗಿ ತನ್ನೆಲ್ಲಾ ಆಸೆಗಳನ್ನ ಬದಿಗೊತ್ತಿ ಕೇವಲ ಮಕ್ಕಳಿಗಾಗಿ ಬದುಕುವ ಜೀವ ತಾಯಿ!ಅಂತಹ ಜಗತ್ತಿನ ಎಲ್ಲಾ ತಾಯಂದಿರಿಗೆ ನನ್ನ ನಮನಗಳು,ಹಾಗೆ ತಾಯಿಯನ್ನು ನಾಯಿಯಂತೆ ನೋಡದಿರಿ,ತಾಯಿಯಿಲ್ಲದೆ ಜಗವೆಲ್ಲ ನಮ್ಮ ಜೊತೆಗಿದ್ದರೂ,ತಾಯಿಯೆಂಬ ಶ್ರೇಷ್ಠ ಚೈತನ್ಯ ಇಲ್ಲದ ಕೊರಗು ನರಕಕ್ಕಿಂತ ಕೀಳಾಗಿ ಇರುತ್ತದೆ!ತಾಯಿಯನ್ನು ‌ಗೌರವಿಸಿ.....

*ಭಾವನೆಗಳ ಬದುಕು ಸೋನು

(ವಿ.ಸೂ: ಒಬ್ಬ ವ್ಯಕ್ತಿಯ ಹಿಂದಿ ಭಾಷಣದ ಕನ್ನಡ ಅನುವಾದ

©Yakshitha

#Sad_Status

9 Love

Trending Topic